ಮಿಥುನ್ ಕಲ್ಲಡ್ಕ ನೇತೃತ್ವದಲ್ಲಿ ನಿತ್ಯಾ ಸೇವಾ ಸಂಜೀವಿನಿ ವತಿಯಿಂದ ಅರ್ಹ ಕುಟುಂಬಕ್ಕೆ ಕಟ್ಟಿಕೊಟ್ಟ ಮನೆಯ ಹಸ್ತಾಂತರ ಕಾರ್ಯ ಶನಿವಾರ ಗೋಳ್ತಮಜಲಿನಲ್ಲಿ ನೆರವೇರಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಸ್ತಾಂತರ ಕಾರ್ಯ ನೆರವೇರಿಸಿ ಶುಭ ಹಾರೈಸಿದರು.
ತೋಟ ನಿವಾಸಿ ಲಕ್ಮೀ ಹಾಗೂ ಅವರ ಮಗಳು ಕಮಲ ಎಂಬವರ ಮನೆ ಬೀಳುವ ಹಂತದಲ್ಲಿದ್ದು, ದುರಸ್ತಿ ಕಾರ್ಯಕ್ಕೆ ಕೈಜೋಡಿಸಿದ ನಿತ್ಯಾ ಸೇವಾ ಸಂಜೀವಿನಿ ತಂಡ, ಊರ, ಪರವೂರ ಹಾಗೂ ಸಂಘ, ಸಂಸ್ಥೆಗಳ ದಾನಿಗಳ ಸಹಕಾರದಿಂದ ಮನೆ ಕಟ್ಟಿಕೊಟ್ಟಿದೆ. ಶ್ರೀ ಗಣೇಶ ಮಂದಿರ ಗೋಳ್ತಮಜಲು, ಭಜರಂಗಿ ಸೇವಾ ಬ್ರಿಗೇಡ್ ಕಲ್ಲಡ್ಕ ಗೋಳ್ತಮಜಲು, ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಲ್ಲಡ್ಕ ಗೋಳ್ತಮಜಲು ಸಾಥ್ ನೀಡಿದೆ.
ಈ ಸಂದರ್ಭ ಪ್ರಮುಖರಾದ ಶ್ಯಾಮ್ ಭಟ್ ತೋಟ, ಗೋಪಾಲಕೃಷ್ಣ ಭಟ್, ಸರ್ವೇಶ್ವರಿ,ಈಶ್ವರ ಭಟ್, ಚಂದ್ರಶೇಖರ ಟೈಲರ್ ಗೋಳ್ತಮಜಲು, ಸುಂದರ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ್, ಸದಸ್ಯರಾದ ಪುರುಷೋತ್ತಮ ಗೋಳ್ತಮಜಲು, ಸರೋಜಿನಿ ಶೆಟ್ಟಿ, ನಳಿನಾಕ್ಷಿ ಡೊಂಬಯ್ಯ, ಭಜರಂಗದಳದ ಪ್ರಮುಖರಾದ ಕೃಷ್ಣಪ್ಪ ಕಲಡ್ಕ, ಸಚಿನ್ ಮೆಲ್ಕಾರ್, ಅಮಿತ್ ಅಂಚನ್ ಕಲ್ಲಡ್ಕ, ತಿಲಕ್ ರಾಜ್, ಪ್ರಮುಖರಾದ ಮುತ್ತಪ್ಪ ಪೂಜಾರಿ, ಮೋಹನ್ ದಾಸ ಕಲ್ಲಡ್ಕ, ಮಹೇಶ್ ಅನಂತಾಡಿ, ನಾಗರಾಜ್ ಬಲ್ಯಾಯ ಕಲ್ಲಡ್ಕ ನಾಗಸುಜ್ಞಾನ, ಹಾಗೂ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಉಪಸ್ಥಿತರಿದ್ದರು..