ಪುತ್ತೂರು ವಿವೇಕಾನಂದ ಪ್ರೌಢಶಾಲೆ ಯಲ್ಲಿ ನಡೆದ ರಾಷ್ಟ್ರಿಯ ಮಟ್ಟದ ಕರಾಟೆ ಮತ್ತು ಎಲೈಡ್ ಮಾರ್ಷಲ್ ಆರ್ಟ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ತನಿಷ್ಕ ಪವನ್ ಕುಮಾರ್ ಚಿನ್ನದ ಪದಕ ಹಾಗೂ ಕಟಾ ವಿಭಾಗದ ಸ್ಪರ್ಧೆಯಲ್ಲಿ ರಜತ ಪದಕ ಪಡೆದಿದ್ದಾರೆ. ಈಕೆ ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಪುತ್ರಿ. ಕುರ್ಯಾಲ ಮೋಹಿನಿ ಮತ್ತು ಜಗದೀಶ್ ಭಂಡಾರಿಯವರ ಮೊಮ್ಮಗಳು.