ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಮಂಜೂರಾದ 10 ಜೊತೆ ಬೆಂಚ್ ಮತ್ತು ಡೆಸ್ಕ್ ಅನ್ನು ರಾಯಿ ಒಕ್ಕೂಟದ ಅಧ್ಯಕ್ಷ ಪರಮೇಶ್ವರ ಪೂಜಾರಿ ಹಸ್ತಾಂತರಿಸಿದರು.
ಬಂಟ್ವಾಳ ಕೇಂದ್ರ ಕಚೇರಿಯ ಕೃಷಿ ಅಧಿಕಾರಿ ಜಯರಾಮ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಹರೀಶ್ ಆಚಾರ್ಯ ರಾಯಿ, ಬಂಟ್ವಾಳ ಕೇಂದ್ರ ಕಚೇರಿ ಕೃಷಿ ಅಧಿಕಾರಿ ಜಯರಾಮ್, ಶಾಲಾ ಸಹಶಿಕ್ಷಕಿ ಬೇಬಿ, ಸೇವಾಪ್ರತಿನಿಧಿ ಶ್ಯಾಮಲಾ ಹಾಗೂ ಒಕ್ಕೂಟದ ಪದಾಧಿಕಾರಿಗಳಾದ ಪ್ರಶಾಂತ್ ಸುವರ್ಣ ದಡ್ಡು, ಗೀತಾ, ಧರ್ಮಾವತಿ ಸಂಘದ ಸದಸ್ಯರು ಉಪಸ್ಥಿತರಿದ್ದರು,