ಬಂಟ್ವಾಳ

ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ

ಬಂಟ್ವಾಳ: ಉತ್ತಮ ಉದ್ದೇಶದ  ಸಂಘಟನೆಯು ಇನ್ನಷ್ಟು ವಿಸ್ತರಿಸುವ ಮೂಲಕ ಹೊಸ ಬದಲಾವಣೆ ತರಲು ಸಾಧ್ಯ. ಉನ್ನತ ಶಿಕ್ಷಣ, ಪ್ರತಿಭೆ ಪ್ರೋತ್ಸಾಹ ನೀಡುವುದರಿಂದ ಉದ್ಯೋಗ, ಉದ್ಯಮ ಇನ್ನಷ್ಟು  ಬೆಳೆಯುತ್ತದೆ ಎಂದು ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಕಂದೂರಿನ ಮಡಿವಾಳ ಮಾಚಿದೇವ ಸಭಾಭವನದಲ್ಲಿ ನಡೆದ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ 33ನೇ ವಾರ್ಷಿಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ತಾಲೂಕು ಸಂಘದ ಅಧ್ಯಕ್ಷ ಹರೀಶ್ ಮಂಕುಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪುತ್ತೂರಿನ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ., ಮಂಗಳೂರು ಆಕೃತಿ ಆಶಯ ಪಬ್ಲಿಕೇಷನ್ ನ ಪ್ರಕಾಶಕ ಕಲ್ಲೂರು ನಾಗೇಶ್,  ತಾಲೂಕು ಸಂಘದ ಗೌರವಾಧ್ಯಕ್ಷ ಎನ್. ಕೆ. ಶಿವ, ಮಡಿವಾಳ ಯುವ ಬಳಗ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಬಳಗ ಅಧ್ಯಕ್ಷೆ  ಶೋಭಾ ಪಂಜಿಕಲ್ಲು ಉಸ್ಥಿತರಿದ್ದರು. ಈ ಸಂದರ್ಭ  ಯೋಗೀಶ್ ಕಳಸಡ್ಕ, ವಿಶ್ವನಾಥ ಮಡಿವಾಳ ಅನಂತಾಡಿ,  ಭಾಗೀರಥಿ ಕೆದಿಲ, ಪದ್ಮನಾಭ ಗುಜರನ್ ಸಿದ್ಧಕಟ್ಟೆ , ವಸಂತಿ ಪ್ರಕಾಶ್ ಕಿದೆಬೆಟ್ಟು, ಲಕ್ಷ್ಮಣ ಬಂಗೇರ  ಶರವು, ಪದ್ಮನಾಭ ಕಿದೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸ್ಪರ್ಶಾ ಕೆಳಗಿನ ಪಂಜಿಕಲ್ಲು ಹಾಗೂ ರಕ್ಷಾ ವಕ್ಷಿತ್ ಪ್ರಾರ್ಥಿಸಿದರು. ಪುಷ್ಪರಾಜ್ ಕುಕ್ಕಾಜೆ ಸ್ವಾಗತಿಸಿ, ಮಹಿಳಾ ಬಳಗದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ