ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ಅನುದಾನ ಮೂಲಕ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಳವಡಿಸಲಾದ 3ಕೆವಿಯ ಆನ್ ಗ್ರಿಂಡ್ ಘಟಕವನ್ನು ಕರ್ಣಾಟಕ ಬ್ಯಾಂಕಿನ ಚೀಫ್ ಮ್ಯಾನೇಜರ್ ಲಕ್ಷ್ಮೀನಾರಾಯಣ ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ ಭಟ್, ಮೆಸ್ಕಾಂ ಎಇಇಗಳಾದ ದಯಾನಂದ್, ನಾರಾಯಣ ಭಟ್ ಹಾಗೂ ಪ್ರಮುಖರಾದ ವಿಜಯಲಕ್ಷ್ಮೀ ಮಯ್ಯ ಉಪಸ್ಥಿತರಿದ್ದರು.