ಬಂಟ್ವಾಳ: ಮೆಲ್ಕಾರ್ ಮಹಿಳಾ ಪದವಿ ಪೂರ್ವ, ಪದವಿ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟ ಕಾಲೇಜಿನಲ್ಲಿ ಜರುಗಿತು. ಕ್ರೀಡಾಕೂಟವನ್ನು ಕಲ್ಲಡ್ಕ ಮ್ಯೂಸಿಯಮ್ ಮಾಲೀಕ ಕೆ ಎಸ್ ಮೊಹಮ್ಮದ್ ಯಾಸೀರ್ ಉದ್ಘಾಟಿಸಿ ಮಾತನಾಡಿ, ಪಾಠದೊಂದಿಗೆ ಆಟವೂ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇದರಿಂದ ದೈಹಿಕ ಮಾನಸಿಕ ಧೃಡತೆ, ಉಲ್ಲಾಸ ಹೆಚ್ಚಾಗುವುದರೊಂದಿಗೆ ಆರೋಗ್ಯ ವರ್ಧನೆಗೂ ಸಹಕಾರಿ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಯಾಸೀರ್ ಅವರನ್ನುಜ ಇದೇ ಸಂದರ್ಭ,ಪ್ರಾಧ್ಯಾಪಕ ಎಂ.ಡಿ.ಮಂಚಿ ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ಮಜೀದ್ ಎಸ್ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಕ್ಷಮತೆಗೆ ಪೂರಕವಾಗಿದ್ದು, ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವೈಸ್ ಪ್ರಿನ್ಸಿಪಾಲ್ ಸುನಿತಾ ಪಿರೇರಾ, ಉಪನ್ಯಾಸಕರಾದ ಹನೀಫ್ ಎಂ, ರಕ್ಷಿತಾ ಕುಮಾರಿ, ಸಂಪ್ರೀತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಹ್ರೂಫ ಸ್ವಾಗತಿಸಿ, ನಝ್ಮಿಯ ಜಾಸ್ಮಿನ್ ಕಾರ್ಯಕ್ರಮ ನಿರ್ವಹಿಸಿ ಅಸ್ಬಹುನ್ನಿಸ ವಂದಿಸಿದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.