ಮೆಲ್ಕಾರ್ ಮುಡಿಪು ರಾಜ್ಯ ಹೆದ್ದಾರಿಯ ಕಂದೂರಿನಲ್ಲಿ ನಿರ್ಮಾಣಗೊಂಡ ಸಜೀಪಮುನ್ನೂರು ಗ್ರಾಮದ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸ್ವಾಗತ ಮಹಾದ್ವಾರವನ್ನು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಲೋಕಾರ್ಪಣೆಗೊಳಿಸಿದರು.
ಸ್ವಾಗತ ದ್ವಾರವು ಜನತೆಯನ್ನು ಆಕರ್ಷಿಸಿ ಸುಬ್ರಹ್ಮಣ್ಯ ದೇವರ ಸೇವೆ ಮಾಡುವ ಯೋಗವನ್ನು ಕರುಣಿಸಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸಜೀಪ ಮಾಗಣೆಯು ಪುಣ್ಯಭೂಮಿಯಾಗಿದ್ದು, ಅದನ್ನು ನಾವೆಲ್ಲರೂ ಸಂಘಟಿತರಾಗಿ ಉಳಿಸಬೇಕಿದೆ ಎಂದರು.
ವೇದಿಕೆಯಲ್ಲಿ ಮಂಗಳೂರು ಸ್ಕ್ಯಾಡ್ಸ್ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಮೆಸ್ಕಾಂ ಬಂಟ್ವಾಳ ಎಇಇ ನಾರಾಯಣ ಭಟ್, ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ವೇದಮೂರ್ತಿ ಶಿವರಾಮ ಮಯ್ಯ ತನ್ನಚ್ಚಿಲ್, ಮಾರ್ನಬೈಲು ಬಝಾರ್ ಗ್ರೂಪ್ ಆಡಳಿತ ನಿರ್ದೇಶಕ ಸುಧಾಕರ ಆಚಾರ್ಯ, ಮುದೆಲ್‌ಮುಟ್ಟಿ ಶ್ರೀ ನಾಲ್ಕೆತ್ತಾಯ ದೈವಸ್ಥಾನದ ಅಧ್ಯಕ್ಷ ಎಂ.ಮಹಾಬಲ ಕೊಟ್ಟಾರಿ ಉಪಸ್ಥಿತರಿದ್ದರು.
ದ್ವಾರವನ್ನು ವಿನ್ಯಾಸಗೊಳಿಸಿದ ಎಂಜಿನಿಯರ್ ಪದ್ಮನಾಭ ಆರ್.ಮೆಲ್ಕಾರ್, ಕೇಶವ ಸುವರ್ಣ ಕಂದೂರು ಹಾಗೂ ಹರೀಶ್ ಪೂಜಾರಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು ಸ್ವಾಗತಿಸಿದರು. ಸದಸ್ಯ ಎನ್.ಕೆ.ಶಿವ ವಂದಿಸಿದರು. ಸಂಘಟಕ ದಾಮೋದರ ಬಿ.ಎಂ.ಕಾರ್ಯಕ್ರಮ ನಿರ್ವಹಿಸಿದರು.