ಬಂಟ್ವಾಳ: ನರಿಕೊಂಬುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳದ ತುಂಬೆ ವಲಯದ ನರಿಕೊಂಬು ಕಾರ್ಯಕ್ಷೇತ್ರದ ಎ ಮತ್ತು ಬಿ ಒಕ್ಕೂಟದ ಸದಸ್ಯರುಗಳಿಗೆ ಸದಸ್ಯರು ಸಂಘಗಳಲ್ಲಿ ಮಾಡಿದ ವ್ಯವಹಾರಗಳಿಗೆ ಸಿಗುವ ಲಾಭಾಂಶ ವಿತರಿಸಲಾಯಿತು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಮಂಗಳ ಗೌರಿ ಹಾಗೂ ಶಿವಶಕ್ತಿ ಸಂಘಕ್ಕೆ ಲಾಭಾಂಶದ ಪತ್ರ ವಿತರಿಸಿ ಮಾತನಾಡಿ ಗ್ರಾಮದ ಅಭಿವೃದ್ಧಿ ದೃಷ್ಟಿಯಲ್ಲಿ ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿಯ ಯೋಜನೆಗಳು ಬಹಳ ಪರಿಣಾಮಕಾರಿ ಬೀರಿದೆ, ಗ್ರಾಮದ ಶಾಲೆಗಳಿಗೆ,ದೇವಸ್ಥಾನಗಳಿಗೆ, ಹಾಗೂ ಸಮುದಾಯದ ಇನ್ನಿತರ ಕಾರ್ಯಗಳಿಗೆ ಯೋಜನೆಯಿಂದ ಸೇವಾ ರೂಪದಲ್ಲಿ ದೊರೆಯುವ ಅನುದಾನ ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ, ಯೋಜನೆಯ ಸಂಘಗಳ ಮೂಲಕ ಮಹಿಳೆಯರು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಕಲ್ಪಿಸಿಕೊಂಡು ಅಭಿವೃದ್ಧಿ ಹೊಂದಿದ್ದಾರೆ ಎಂದರು.
ಈ ಸಂದರ್ಭ ಪ್ರಗತಿಪರ ಕೃಷಿಕರಾದ ಪ್ರೇಮನಾಥ್ ಶೆಟ್ಟಿ ಅಂತರ, ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ, ಉಪಾಧ್ಯಕ್ಷರಾದ ವಿಮಲ, ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷ ಜಯಂತ್ ಪಲ್ಲತ್ತಿಲ್ಲ, ನರಿಕೊಂಬು ಕಾರ್ಯಕ್ಷೇತ್ರದ ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಕುಸುಮಾವತಿ ಹಾಗೂ ಪ್ರತಿಭಾ, ಮಂಗಳ ಗೌರಿ ಹಾಗೂ ಶಿವ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು