ಬಂಟ್ವಾಳ

ಮೈಟ್ ಟೆಕ್ನಿಕಲ್ ಕಾಲೇಜ್; ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ: ಕಲಿಕೆಯ ಜತೆಗೆ ಚಿತ್ರಕಲೆಯಿಂದ ಪರಿಪೂರ್ಣತೆ: ದಿನೇಶ್ ಹೊಳ್ಳ

ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ನೆಲೆಯಿಂದ ಕಳೆದ 24 ವರ್ಷಗಳಿಂದ ಬಿ. ಸಿ. ರೋಡ್ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಟೆಕ್ನಿಕಲ್ ಹಾಗೂ ಪ್ರೊಫೆಶನಲ್ ಕಾಲೇಜ್ ನ ನೇತೃತ್ವದಲ್ಲಿ ಅಂತರ್ ಶಾಲಾ ಕಾಲೇಜು ಚಿತ್ರ ಕಲಾ ಸ್ಪರ್ಧೆ ಬಿ. ಸಿ. ರೋಡ್ ನ ಲಯನ್ಸ್ ಕ್ಲಬ್ ನಡೆಯಿತು.

ಜಾಹೀರಾತು

ಚಿತ್ರಕಲಾವಿದ ದಿನೇಶ್ ಹೊಳ್ಳ ಅವರು ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಜತೆಗೆ ಚಿತ್ರಕಲೆಯೂ ಕರಗತವಾದರೆ ಜೀವನದಲ್ಲಿ ಪರಿಪೂರ್ಣತೆ ದೊರೆಯಲು ಸಾಧ್ಯ ಎಂದರು.

ಪ್ರಾಂಶುಪಾಲರಾದ ರಾಕೇಶ್ ಮತ್ತು ನಿಶ್ಮಿತ ರಾಕೇಶ್, ಮುಖ್ಯ ಶಿಕ್ಷಕ ಅಶ್ರಫ್, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಚಾಂದಿನಿ ಮತ್ತು ನಾಯಕ ಮಿಥುನ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಷ್ಮಾ ನಿರೂಪಿಸಿದರು. ಪ್ರೀಮಲ್ ಪ್ರಸ್ತಾವಿಸಿದರು. ಸ್ವಾತಿ ಅವರು ಅತಿಥಿ ಪರಿಚಯ ಮಾಡಿದರು. ನಿಶ್ಮಿತ ವಂದಿಸಿದರು. ಎರಡು ವಿಭಾಗಗಳಲ್ಲಿ ನಡೆಸಲಾದ ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈ. ಎನ್. ತಾರನಾಥ ಆಚಾರ್ಯ ಮತ್ತು ಸತೀಶ್ ಪಂಜ ತೀರ್ಪುಗಾರರಾಗಿದ್ದರು. ಬಹುಮಾನ ವಿತರಣಾ ಸಮಾರಂಭದ ನಿರೂಪಣೆಯನ್ನು ಶಿಕ್ಷಕಿ ಗೀತಾ ನಡೆಸಿದರು. ಸ್ವಾತಿ ವಂದಿಸಿದರು. ಫಲಿತಾಂಶ ಹೀಗಿದೆ

ಪ್ರೌಢಶಾಲಾ ವಿಭಾಗಲ್ಲಿ ಪೂರ್ವಿಕ ಎಮ್. ಡಿ – ಸರಕಾರಿ ಪ್ರೌಢಶಾಲೆ ಕಾವಲಕಟ್ಟೆ ತೃತೀಯ, ಸ್ಪಂದನ ಜೆ. ಶೆಟ್ಟಿ – ಎಸ್. ವಿ. ಎಸ್ ಬಂಟ್ವಾಳ ದ್ವಿತೀಯ, ಮೆಹಕ್ ಫಾತಿಮ – ವಿದ್ಯಾರತ್ನ ಆಂಗ್ಲ ಮಾಧ್ಯಮ ದೇರಳಕಟ್ಟೆ ಪ್ರಥಮ ಸ್ಥಾನ ಪಡೆದರು.

ಕಾಲೇಜು ವಿಭಾಗದಲ್ಲಿ ಪ್ರಣತಿ – ಸರಕಾರಿ ಪಿ. ಯು ಕಾಲೇಜು ಸಿದ್ದಕಟ್ಟೆ ತೃತೀಯ, ಎಂ. ಕೀರ್ತನ್ – ಗುರುದೇವ ಫಸ್ಟ್ ಗ್ರೇಡ್ ಕಾಲೇಜು ಬೆಳ್ತಂಗಡಿ ದ್ವಿತೀಯ, ದಿಶನ್ – ದಯಾನಂದ ಪೈ ಕಾಲೇಜು ಕಾರ್ ಸ್ಟ್ರೀಟ್ – ಪ್ರಥಮ ಸ್ಥಾನ ಪಡೆದಿದ್ದಾರೆ. ಸಮಾಧಾನಕರ ಬಹುಮಾನವನ್ನು ರಿತೇಶ್ ಎಸ್. ಕೆ – ಸರಕಾರಿ ಪ್ರೌಢಶಾಲೆ ಕೋಯಿಲ, ರಿಫ್ಕ ಫಾತಿಮ – ತೌಹೀದ್ ಬಂಟ್ವಾಳ, ಮೋಯಿದೀನ್ ಶಮೀರ್ – ಕಾರ್ಮೆಲ್ ಕಾಲೇಜು, ಪವನ್ ಶೆಟ್ಟಿ – ಯುನಿವರ್ಸಿಟಿ ಕಾಲೇಜ್ ಮಂಗಳೂರು, ಪ್ರೀತಿ – ಕೊಲೊಸೋ ಕಾಲೇಜ್ ಕಂಕನಾಡಿ, ಪ್ರಥಮ್ – ಕಾರ್ಮೆಲ್ ಕಾಲೇಜ್, ಆಯಿಶತ್ತುಲ್ ಮಹಸಿನ – ಬೆಸೆಂಟ್ ಕಾಲೇಜ್, ನಿಶಾ – ಕಾರ್ಮೆಲ್ ಕಾಲೇಜು, ಫಾತಿಮತ್ ನುಹ – ವಿದ್ಯಾರತ್ನ ಆಂಗ್ಲ ಮಾಧ್ಯಮ ದೇರಳಕಟ್ಟೆ, ಸೈನ ಪ್ರಿನ್ಸಿಟ ಮಿಸ್ಕ್ವಿತ್ – ಕಾರ್ಮೆಲ್ ಪಿ. ಯು ಕಾಲೇಜು ಪಡೆದುಕೊಂಡರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

1 hour ago