ಪ್ರಮುಖ ಸುದ್ದಿಗಳು

ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ನೇತ್ರ ತಪಾಸಣೆ, ನೇತ್ರದಾನ ಸಂಕಲ್ಪ ನೋಂದಣಿ

ಮಂಗಳೂರು: ವಿಶ್ವ ದೃಷ್ಟಿ ದಿನದ ಅಂಗವಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ , ಪ್ರಸಾದ್ ನೇತ್ರಾಲಯ ಮಂಗಳೂರು, ಆನ್ಸೈಟ್ ಎಸ್ಸಿಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಮತ್ತು ಸೆಂಚುರಿ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕೊಂಚಾಡಿ ದೇರೇಬೈಲಿನ ಶ್ರೀರಾಮ ಭಜನಾ ಮಂದಿರದ ಕೊಂಚಾಡಿ ದೇರೆಬೈಲು ಶ್ರೀಮತಿ ಲಕ್ಮಿ ಮತ್ತು ಶ್ರೀ ಶೇಷಪ್ಪ ದೇವಾಡಿಗ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರ ದಾನ ಸಂಕಲ್ಪ ನೋಂದಣಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು  ದ ಕ ಜಿಲ್ಲೆ ವಿಶೇಷ ಚೇತನರ ಹಾಗು ಸಬಲೀಕರಣ ಇಲಾಕೆ MRW ಜಯಪ್ರಕಾಶ್ ಉದ್ಘಾಟಿಸಿದರು. ಸಕ್ಷಮ ದ ಕ ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ಷಮದ ಧ್ಯೇಯ ಮತ್ತು ಉದ್ದೇಶ, ನೇತ್ರದಾನದ ಅರಿವಿನ ಕುರಿತು ತಿಳಿಸಿದರು.

ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾ. ಶೀತಲ್ ನೇತ್ರದಾನದ ವಿಧಿ ವಿಧಾನಗಳನ್ನು ವಿವರಿಸಿದರು. ಈ ಸಂದರ್ಭ ಇತ್ತೀಚೆಗೆ ಸಕ್ಷಮ ದ ಕದ ಪ್ರಭಾವದಿಂದ ಪ್ರೇರಣೆಗೊಂಡು ನೇತ್ರದಾನ ಮಾಡಿದ ಕೃಷ್ಣಮೂರ್ತಿ ಅಡಿಗ ಅವರ ಕುಟುಂಬದವರನ್ನು ದಾನಮಾನ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಮ ಭಜನಾ ಮಂದಿರದ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ರಾಜೇಶ್, ವಿಕಾಸಂ ಫೌಂಡೇಶನ್ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ  ನಾರಾಯಣ ಕಂಜರ್ಪಣೆ, ಸಕ್ಷಮ ದ ಕ ದ ಖಜಾಂಜಿ ಸತೀಶ್ ರಾವ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಕ್ಷಮ ದ ಕದ ಕಾರ್ಯದರ್ಶಿ ಹರೀಶ್ ಪ್ರಭು ನಿರೂಪಿಸಿ ಧನ್ಯವಾದ ಮಾಡಿದರು. ಪ್ರಾರ್ಥನೆಯನ್ನು ಅನುಷಾ ಕಾಕುಂಜೆ ಮತ್ತು ಸಕ್ಷಮ ಗೀತೆಯನ್ನು ಗೀತಾ ಲಕ್ಷ್ಮೀಶ ಅವರು ಮಾಡಿದರು. ದಾನಮಾನ ಪತ್ರವನ್ನು ಭಾಸ್ಕರ್ ಹೊಸಮನೆ ವಾಚಿಸಿದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನ ಉಚಿತ ನೇತ್ರ ತಪಾಸಣೆಯ ಸೌಲಭ್ಯವನ್ನು ಪಡಕೊಂಡರು. ಅಲ್ಲದೆ 24 ಜನ ನೇತ್ರ ದಾನದ ಸಂಕಲ್ಪವನ್ನು ಕೈಕೊಂಡರು. ಹಿರಿಯ ಸಾಮಾಜಿಕ ಕಾರ್ಯಕರ್ತ ನೀಡುಗಳ ಸುಬ್ರಹ್ಮಣ್ಯ ಭಟ್ ಪ್ರಥಮ ನೇತ್ರದಾನದ ಸಂಕಲ್ಪವನ್ನು ಕೈಕೊಂಡರು. ನೇತ್ರ ದಾನ ಸಂಕಲ್ಪ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರವನ್ನು ಪ್ರಸಾದ್ ನೇತ್ರಾಲಯದಿಂದ ವಿತರಿಸಲಾಯಿತು. ಅರ್ಹ ವ್ಯಕ್ತಿಗಳಿಗೆ ಉಚಿತ, ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಅದಲ್ಲದೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಲಾಯಿತು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ