ಬಂಟ್ವಾಳ: ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ನ ಮೆಕ್ಯಾನಿಕಲ್ ವಿಭಾಗದ ಅಸಿಸ್ಟ್ಂಟ್ ಪ್ರೊಫೆಸರ್ ರಾಮಕೃಷ್ಣ ದೇವಾನಂದ ಮಂಡಿಸಿದ ಥರ್ಮಲ್ ಕಂಫಾರ್ಮ್ಯಾನ್ಸ್ ಬಿಟ್ವೀನ್ ಮೆಟಲ್-ಮೆಟಲ್ ಕಾಂಟಾಕ್ಟ್ ಸ್ ಅಂಡರ್ ಟ್ರಾನ್ಸಿಯಂಟ್ ಕಂಡೀಶನ್ಸ್-ಎ ಸ್ಟಡಿ (ದಿ ಇಫೆಕ್ಟ್ ಆಫ್ ಟಿಮ್ಸ್ ಥರ್ಮೋ ಫಿಸಿಕಲ್ ಪ್ರೊಪರ್ಟಿಸ್ ಆಂಡ್ ದಿ ಇಂಟರ್ ಫೇಸಿಯಲ್ ಪ್ರೆಷರ್) ಎಂಬ ಮಹಾ ಪ್ರಬಂಧಕ್ಕೆ ಸುರತ್ಕಲ್ ನ್ಯಾಷನಲ್ ಇಸ್ಟಿಟ್ಯೂಶನ್ ಆಫ್ ಟೆಕ್ನಾಲೆಜ್ ಕರ್ನಾಟಕ ಸಂಸ್ಥೆ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ. ಎನ್‌ಐಟಿಕೆ ಸಂಸ್ಥೆಯ ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಕೆ.ನಾರಾಯಣ ಪ್ರಭು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.ಇವರು ಬಿ.ಎಸ್.ಎನ್.ಎಲ್.ನ ನಿವೃತ್ತ ಉದ್ಯೋಗಿ ಯಜ್ಞೇಶ್ವರ ಪತ್ತುಮುಡಿ ಮತ್ತು ಪುಷ್ಪಾ ಕುಮಾರಿ ದಂಪತಿ ಪುತ್ರರಾಗಿದ್ದಾರೆ.