ಬಂಟ್ವಾಳ: 2025-26ರಿಂದ 2029-30ರವರೆಗೆ ಬಂಟ್ವಾಳ ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಪ್ರಕ್ರಿಯೆಯನ್ನು ಬಂಟ್ವಾಳ ತಾಲೂಕು ಬಂಟ್ವಾಳ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಕೃಷಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 15ರಂದು ಚುನಾವಣೆ ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಉಮೇದುವಾರಿಕೆ ಸಲ್ಲಿಸುವವರಿಗೆ ನ.30ರಿಂದ ನಾಮಪತ್ರ ವಿತರಿಸಲಾಗುವುದು. ನಾಮಪತ್ರ ವಾಪಸ್ ಪಡೆಯುವ ದಿನಾಂಕ ಡಿ.9 ಆಗಿದೆ. ಆಕಾಂಕ್ಷಿ ಕೃಷಿಕ ಸಮಾಜದ ಸದಸ್ಯರು ಚುನಾವಣಾಧಿಕಾರಿಗೆ ಅರ್ಜಿ ಜೊತೆ ರೂ 250 ಠೇವಣಿಯಾಗಿ ಪಾವತಿಸಿ ಮೂಲ ರಶೀದಿ ಹಾಗೂ ತಹಸೀಲ್ದಾರ್ ಅವರಿಂದ ದೃಢೀಕೃತ ಪಹಣಿಪ್ರತಿಯೊಂದಿಗೆ ಡಿ.6ರ ಬೆಳಗ್ಗೆ 11ರಿಂದ 5ರ ಒಳಗೆ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.