ಬಂಟ್ವಾಳ ತಾಲೂಕಿನಲ್ಲಿ ನವೆಂಬರ್ 23ರಂದು ನಡೆದ ಪುರಸಭೆ, ಗ್ರಾಪಂ ಉಪಚುನಾವಣೆಯ ಮತಗಳಿಕೆ ವಿವರಗಳು ಹೀಗಿವೆ. ತಾಲೂಕು ಕಚೇರಿಯಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು. ಚುನಾವಣಾ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ವಯ ಮತಗಳಿಕೆ ವಿವರಗಳು ಹೀಗಿವೆ.
ಪುರಸಭೆ: ಬಿ.ಕಸ್ಬಾ: ಪುರುಷೋತ್ತಮ ಎಸ್. ಬಂಗೇರ (ಕಾಂಗ್ರೆಸ್) 496, ಇಂದ್ರೇಶ್ ಪೂಜಾರಿ (ಬಿಜೆಪಿ) 456. ನೋಟಾ 9. ಒಟ್ಟು 961 ಮತಗಳು. ಪುರುಷೋತ್ತಮ ಬಂಗೇರ 40 ಮತಗಳಿಂದ ಗೆದ್ದಿದ್ದಾರೆ.
ಗ್ರಾಪಂಗಳು:
ಚೆನ್ನೈತೋಡಿ ಕುಡಂಬೆಟ್ಟು: ಜಯಂತಿ ಸತೀಶ್ ಪೂಜಾರಿ 320, ತೇಜಾಕ್ಷಿ ಜೆ.ಪೂಜಾರಿ 263. ತಿರಸ್ಕೃತ 10. ಒಟ್ಟು 593.
ಬಡಗಬೆಳ್ಳೂರು: ಮೋಹನದಾಸ್ 477, ಮಹಮ್ಮದ್ ಸುಲೈಮಾನ್ ಬಿ.ಕೆ. 459, ತಿರಸ್ಕೃತ 16. ಒಟ್ಟು 952.
ಸಜೀಪಮುನ್ನೂರು: ಅಬ್ದುಲ್ ಹಕೀಂ:301, ಇಬ್ರಾಹಿಂ: 29, ಇಸ್ಮಾಯಿಲ್ ನಂದಾವರ ಕೋಟೆ: 566, ಮುಬಾರಕ್: 50, ತಿರಸ್ಕೃತ 5. ಒಟ್ಟು: 951.
ಪೆರ್ನೆ: ನಳಿನಿ ರೋಹಿತಾಕ್ಷ: 514, ಪ್ರತಿಮಾ ರಾಜೀವ ಭಂಡಸಾಲೆ: 383, ತಿರಸ್ಕೃತ: 12. ಒಟ್ಟು: 909.
ಪಂಜಿಕಲ್ಲು: ಕೇಶವ ಪೂಜಾರಿ:540, ಪ್ರತಿಮಾ ಮೋಹನದಾಸ ಪೂಜಾರಿ: 429, ತಿರಸ್ಕೃತ 12. ಒಟ್ಟು: 981.
ಪಂಜಿಕಲ್ಲು: ಕೇಶವ ಪೂಜಾರಿ: 457, ರಾಜೇಶ್ ಗೌಡ: 508, ತಿರಸ್ಕೃತ: 11. ಒಟ್ಟು 976.
ಮಂಚಿ: ಗೋಪಾಲ ನಾಯ್ಕ: 308, ರಾಜೇಶ್ ನೂಜಿಪ್ಪಾಡಿ: 336, ತಿರಸ್ಕೃತ: 5, ಒಟ್ಟು: 649.
ಸಜಿಪಮುನ್ನೂರು: ಧನಂಜಯ ಶೆಟ್ಟಿ: 594, ಧನ್ಯಶ್ರೀ ಪಿ.ಎಸ್. 33, ಫಿಲಿಪ್ ಹೆನ್ರಿ ಡಿಸೋಜ: 340, ಸಚಿನ್ ಕುಮಾರ್: 18, ಸಿಂತಿಯಾ ವೆಲೆಂಟೈನ್ ಡಿಸೋಜ: 328, ಸೆಲಿನ್: 604, ತಿರಸ್ಕೃತ: 3. ಒಟ್ಟು 1920.
ಅಮ್ಟಾಡಿ: ಕೇಶವ ಜೋಗಿ: 361, ರಾಜೇಶ್: 347, ತಿರಸ್ಕೃತ: 33, ಒಟ್ಟು: 741.
ಸಜಿಪಮೂಡ: ಬಶೀರ್ ಜಾಡಕೋಡಿ: 41, ಎನ್.ಅಬ್ದುಲ್ ಕರೀಂ: 629, ಸುರೇಂದ್ರ ಪೂಜಾರಿ: 397, ತಿರಸ್ಕೃತ: 11. ಒಟ್ಟು: 1078
ವಿಜೇತರ ವಿವರ ಹೀಗಿದೆ: ಬಂಟ್ವಾಳ ಪುರಸಭೆ: ಬಿ.ಕಸ್ಬಾ ಸ್ಥಾನ: ಪುರುಷೋತ್ತಮ ಎಸ್. ಬಂಗೇರ. ಅಮ್ಟಾಡಿ ಗ್ರಾಪಂ: ಕೇಶವ ಜೋಗಿ, ಬಡಗಬೆಳ್ಳೂರು ಮೋಹನದಾಸ, ಪಂಜಿಕಲ್ಲು ರಾಜೇಶ್ ಗೌಡ, ಕೇಶವ, ಸಜಿಪಮೂಡ: ಕರೀಂ, ಚೆನ್ನೈತೋಡಿಯ ಕುಡಂಬೆಟ್ಟು ಕ್ಷೇತ್ರ: ಜಯಂತಿ ಸತೀಶ್ ಪೂಜಾರಿ, ಸಜಿಪಮುನ್ನೂರು: ಇಸ್ಮಾಯಿಲ್, ಪೆರ್ನೆಯ ಬಿಳಿಯೂರು ಕ್ಷೇತ್ರ: ನಳಿನಿ, ಸಜಿಪಮುನ್ನೂರು: ಧನಂಜಯ ಶೆಟ್ಟಿ, ಸಜಿಪಮುನ್ನೂರು: ಸೆಲಿನ್, ಮಂಚಿ: ರಾಜೇಶ್ ನೂಜಿಪ್ಪಾಡಿ. ಇವರಲ್ಲಿ ಬಡಗಬೆಳ್ಳೂರು ಮತ್ತು ಮಂಚಿಯಿಂದ ಆಯ್ಕೆಯಾದ ಮೋಹನದಾಸ್ ಮತ್ತು ರಾಜೇಶ್ ನೂಜಿಪ್ಪಾಡಿ ಬಿಜೆಪಿ ಬೆಂಬಲಿತರಾಗಿದ್ದರೆ, ಉಳಿದವರು ಕಾಂಗ್ರೆಸ್ ಬೆಂಬಲಿತರು.