ಬಂಟ್ವಾಳ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಿಸಿ ರೋಡ್ .ಸಂಘದ ಸಭಾಭವನದಲ್ಲಿ ಬುಧವಾರ ನೆರವೇರಿತು.

ಜಾಹೀರಾತು

ಅಧ್ಯಕ್ಷ ರಾಗಿ  ಶಿವಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಯಾಗಿ  ಸಂತೋಷ್ ಕುಮಾರ್,ಖಜಾಂಚಿಯಾಗಿ ಬಸಯ್ಯ ಆಲಿಮಟ್ಟಿ,ರಾಜ್ಯ ಪರಿಷತ್ ಸದಸ್ಯರಾಗಿ  ಜನಾರ್ಧನ್ ಜೆ ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ  ಶಮಂತ್ ಕುಮಾರ್,ಹಿರಿಯ ಉಪಾಧ್ಯಕ್ಷರಾಗಿ  ನಂದನ್ ಶೆಣೈ,ಶ್ರೀಯಮನಪ್ಪ ಹಾಗೂ ಉಪಾಧ್ಯಕ್ಷ ರಾಗಿ ಲಕ್ಷ್ಣಣ್ ಹೆಚ್ ಕೆ, ರಮಾನಂದ, ಸೀತಾರಾಮ‌ ಪೂಜಾರಿ  ಆಯ್ಕೆಯಾಗಿರುತ್ತಾರೆ. ತಾಲೂಕಿನ ವಿವಿಧ ಇಲಾಖೆಯಿಂದ ಒಟ್ಟು 28 ಮಂದಿಯನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರು,ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು  ರಮೇಶ್ ನಾಯಕ್ ರಾಯಿ ಸಹಕರಿಸಿದರು. ನಂತರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷ ತೆಯನ್ನು ನಿಕಟಪೂರ್ವ ಅಧ್ಯಕ್ಷ ರಾದ  ಉಮಾನಾಥ ರೈ ಮೇರಾವು ವಹಿಸಿದ್ದರು.ವೇದಿಕೆಯಲ್ಲಿ ಚುನಾವಣಾಧಿಕಾರಿಗಳಾದ  ರಮೇಶ್ ನಾಯಕ್ ರಾಯಿ, ನೂತನ ಅಧ್ಯಕ್ಷ ರಾದ  ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್,ಖಜಾಂಚಿ ಬಸಯ್ಯ ಆಲಿಮಟ್ಟಿ,ರಾಜ್ಯ ಪರಿಷತ್ ಸದಸ್ಯರು ಜೆ ಜನಾರ್ಧನ್,ಗೌರವ ಸಲಹೆಗಾರರಾದ ಡಾ ಆಶೋಕ್ ಕುಮಾರ್ ರೈ,ಅಂಬಾಪ್ರಸಾದ್,ನವೀನ್ ಕುಮಾರ್ ಬೆಂಜನಪದವು, ಜೋಯೆಲ್ ಲೋಬೋ,ಗುರುರಾಜ ,ಇಂದುಶೇಖರ್,ರಾಜೇಂದ್ರ ರೈ,ಪದ್ಮರಾಜ್ ಶಿಂಧೆ,ಜನಾರ್ಧನ್ ಕೊಯಿಲ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಖಜಾಂಚಿ ಬಸಯ್ಯ ಆಲಿಮಟ್ಟಿ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

1 hour ago