ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆದವು.
ಬುಧವಾರ ಸಹಸ್ರನಾಮ ಆರತಿ, ಪುಳಕಾಭಿಷೇಕದ ಆರತಿ, ನಂತರ ಮಹಾ ನೈವೇದ್ಯ, ಮಂಗಳಾರತಿ, ಹತ್ತು ಸಮಸ್ತರ ಪ್ರಾರ್ಥನೆ ಬಳಿಕ ಶ್ರೀ ದೇವರು ವನಕ್ಕೆ ಚಿತ್ರೈಸುವ ಕಾರ್ಯಕ್ರಮದ ಬಳಿಕ ಧಾತ್ರಿ ಹವನ ಮಧ್ಯಾಹ್ನ ನಡೆಯಿತು. ಬಳಿಕ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಪೂರ್ಣಾಹುತಿ, ಮಂಗಳಾರತಿ, ಹತ್ತು ಸಮಸ್ತರು ಹಾಗೂ ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಪಟ್ಟದ ದೇವರಿಗೆ ರಾತ್ರಿ ಪೂಜೆ, ದೀಪ ನಮಸ್ಕಾರ, ಸಣ್ಣಗುರ್ಜಿ ಪೂಜೆ, ಶ್ರೀ ಹನುಮಂತ ದೇವಸ್ಥಾನದಲ್ಲಿ ಪೂಜೆ, ಶ್ರೀ ದೇವರು ದೊಡ್ಡ ಗುರ್ಜಿಯಲ್ಲಿ ಚಿತ್ತೈಸುವ ಕಾರ್ಯಕ್ರಮದ ಬಳಿಕ ಲಕ್ಷ ಆರತಿ ಸೇವೆ, ಶ್ರೀ ಮಹಮ್ಮಾಯ ದೇವಸ್ಥಾನದಲ್ಲಿ ಪೂಜೆ, ಶ್ರೀ ಕಾಶೀ ಮಠದಲ್ಲಿ ಪೂಜೆ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ರೈಸುವ ಕಾರ್ಯಕ್ರಮ ನಡೆಯಿತು.ಗುರುವಾರ ದ್ವಾದಶ ಕಲಶ ಸಂಪ್ರೋಕ್ಷಣೆ ಮಹಾಪೂಜೆ ನಡೆದವು. ಬಳಿಕ ಮರುದೀಪೋತ್ಸವ ಬಾಬ್ತು ನದಿ ತೀರದ ಬಳಿ ಸಣ್ಣ ಗುರ್ಜಿಯಲ್ಲಿ ಪೂಜೆ ನಡೆಯಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡರು.