ಬಂಟ್ವಾಳ: ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ,ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಗ್ರಂಥಾಲಯ ಕೊಠಡಿ ಮತ್ತು ಅಂಗನವಾಡಿ ಕೇಂದ್ರದ ಆಟಿಕಾ ವನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿದರು.
ಮಕ್ಕಳಿಗೆ ಶೈಕ್ಷಣಿಕ ಮನೋಭಾವವನ್ನು ಮೂಡಿಸುವ ಪ್ರಾರಂಭಿಕ ಹಂತವೇ ಅಂಗನವಾಡಿಯಾಗಿದೆ. ಇಲ್ಲಿ ಆಟ, ಪಾಠದೊಂದಿಗೆ ಸಂಸ್ಕಾರ ನೀಡುವುದೇ ಮುಂದಿನ ಜೀವನದ ತಳಹದಿ ಈ ನಿಟ್ಟಿನಲ್ಲಿ ಪರಿಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆ ಜೊತೆ ಸಹಕಾರ ನೀಡಿದ ಕಂಪೆನಿಯ ಹಾಗೂ ಗ್ರಾಮದ ಸರ್ವರಿಗೂ ಅಭಿನಂದನೆ ಸಲ್ಲಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ,ಬಾಳ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜಿನಿ ವಹಿಸಿದ್ದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಮಾತನಾಡಿದರು.ಅತಿಥಿಗಳಾಗಿ ಚೆನ್ನಪ್ಪ ಕೋಟ್ಯಾನ್, ಎಂ ಆರ್ ಪಿ. ಎಲ್ ನ ವಿಕ್ರಮ್ ನಾಯಕ್, ಗ್ರಾ.ಪಂ.ಸದಸ್ಯರಾದ ವಿಠಲ್ ನಾಯ್ಕ್, ಲೀಲಾವತಿ,ಲತೀಶ್ ,ದೇವಿಕಾ,ಉಷಾ,ಸುಂದರ ಸಾಲಿಯಾನ್,ಮಮತಾ,ಮೋಹನ್ ಪ್ರಭು,ಸುರೇಖಾ, ಸುಜಾತ ,ಶಿವರಾಜ್,ಮತ್ತಿತರರು ಉಪಸ್ಥಿತರಿದ್ದರು.