ಬಂಟ್ವಾಳ: ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವ್ಯಕ್ತಿಯನ್ನು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ. BANTWAL TOWN POLICE STATION NO: 08255232111
ಸಜಿಪಮುನ್ನೂರು ಗ್ರಾಮದ ನಾಗನವಳಚ್ಚಿಲ್ ಮನೆಯ ಉಗ್ಗಪ್ಪ ಪೂಜಾರಿ (70) ನಾಪತ್ತೆಯಾದವರು. ನವೆಂಬರ್ 5ರಂದು 10 ಗಂಟೆಗೆ ಪಾಣೆಮಂಗಳೂರು ಯೂನಿಯನ್ ಬ್ಯಾಂಕ್ ಗೆ ಹೊಗಿ ವೃದ್ದಾಪ್ಯ ವೇತನವನ್ನು ಪಡೆದುಕೊಂಡು ವಾಪಾಸ್ ಮನೆಗೆ ಬಂದು ಬಳಿಕ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಮನೆಯಿಂದ ಹೋಗಿದ್ದಾರೆ. ಈ ಕುರಿತು ಮಗ ಹಾಗೂ ಸಂಬಂದಿಕರು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮೇಲ್ಕಂಡ ವ್ಯಕ್ತಿ ಪತ್ತೆಯಾದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ವಿನಂತಿಸಿಕೊಂಡಿರುತ್ತಾರೆ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…