ಬಂಟ್ವಾಳ : ಸಜಿಪಮೂಡ ಗ್ರಾಮದ ಮಂಜಲ್ಪಾದೆ ಸಮೀಪದ ಕೇಕುನಾರಬೆಟ್ಟು ನಿವಾಸಿ ಪುತ್ತುಬಾವಾ ಅವರ ಮನೆಗೆ ಭಾನುವಾರ ರಾತ್ರಿ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ರಾತ್ರಿ ಸುಮಾರು 8 ಗಂಟೆ ವೇಳೆಗೆ ಈ ಸಿಡಿಲಾಘಾತ ಸಂಭವಿಸಿದ್ದು, ಮನೆ ಮಂದಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರೆ. ಪುತ್ತುಬಾವಾ ದಂಪತಿ ಹಾಗೂ ನಾಲ್ಕು ಮಂದಿ ಮಕ್ಕಳು ಮನೆಯಲ್ಲಿರುವ ಸಂದರ್ಭ ಈ ಅವಘಡ ಸಂಭವಿಸಿದೆ.
ಸಿಡಿಲಾಘಾತದಿಂದ ಮನೆಯ ವಿದ್ಯುತ್ ಉಪಕರಣಗಳಾದ ಇನ್ವರ್ಟರ್, ಫ್ಯಾನ್ ಗಳು, ಟ್ಯೂಬುಗಳು, ಸ್ವಿಚ್ ಬೋರ್ಡ್‍ಗಳು, ಮೈನ್ ಸ್ವಿಚ್ ಹಾಗೂ ವಯರಿಂಗ್ ಸೇರಿದಂತೆ ಬಹುತೇಕ ಉಪಕರಣಗಳು ಸುಟ್ಟು ಕರಕಲಾಗಿವೆ. ಸಿಡಿಲಿನ ಆಘಾತದ ರಭಸಕ್ಕೆ ಫ್ಯಾನುಗಳು ಬಿಚ್ಚಿ ನೆಲಕ್ಕೆ ಅಪ್ಪಳಿಸಿದ್ದು, ಬೆಂಕಿಯ ಕಿಡಿಯೂ ಹೊತ್ತಿಕೊಂಡಿತ್ತು. ಮನೆ ಮಂದಿ ಬೇರೆ ಬೇರೆ ಕೋಣೆಗಳಲ್ಲಿದ್ದುದರಿಂದ ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)