ಸಜೀಪಮೂಡ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಸಂಜೀವಿನಿ ಕಾರ್ಯಕ್ರಮಗಳ ಚಟುವಟಿಕೆಗಳ ಕೊಠಡಿ ಸಂಜೀವಿನಿ ವರ್ಕ್ ಶೆಡ್ ಕಟ್ಟಡ ಕಾರ್ಯಾರಂಭ ಮಾಡಿದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉಪಾಧ್ಯಕ್ಷೆ ಫೌಝಿಯಾ, ಸದಸ್ಯರಾದ ಎಸ್ ಸಿದ್ದೀಕ್, ಯೋಗೀಶ್ ಬೆಳ್ಚಾಡ, ವಿಶ್ವನಾಥ ಬೆಳ್ಚಡ, ಹಮೀದ್, ಸೋಮನಾಥ ಬಂಗೇರ, ಪ್ರಶಾಂತ, ಕುಶಾಲಾಕ್ಷ, ಹರಿಣಾಕ್ಷಿ, ಯಮುನಾ, ಪ್ರಮೀಳ ವಾಯ್ಲೆಟ್ ಡಿ ಕ್ರೂಜ್, ವಿಜಯ, ಅರುಂಧತಿ, ಸುಂದರಿ, ಮಹಾದೇವಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಯಾ, ಕಾರ್ಯದರ್ಶಿ ಸುರೇಖಾ, ನರೇಗಾ ಸಿಬಂದಿ, ಪುನರ್ವಸತಿ ಸಿಬಂದಿ ಹಾಗೂ ಗ್ರಾಪಂ ಸಿಬಂದಿ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…