ಬಂಟ್ವಾಳ: ರಾಜ್ಯೋತ್ಸವ ಆಚರಣೆ ಸಂದರ್ಭ ಸನ್ಮಾನ ಸಮಾರಂಭ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ನಡೆಯಿತು. ಪಾಣೆಮಂಗಳೂರು ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಎನ್. ನರೇಂದ್ರನಾಥ ಕುಡ್ವಾ ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ, ಸಾಹಿತಿ ಕವಿ ಜಯಾನಂದ ಪೆರಾಜೆ ಹಾಗೂ ಪಾಣೆಮಂಗಳೂರಿನ ಆಶಾ ಕಾರ್ಯಕರ್ತೆ ಜ್ಯೋತಿಲಕ್ಷ್ಮಿ ಅವರ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಸಂಚಾಲಕರಾದ ಡಾ. ಪಿ ವಿಶ್ವನಾಥ ನಾಯಕ್, ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ, ಶಾಲೆಯ ಹಿರಿಯ ಶಿಕ್ಷಕಿ ಸುಧಾ, ಶಾಲಾ ನಾಯಕ ಮನ್ವಿತ್ ಸಿ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶಿವಪ್ಪ ನಾಯಕ್ ಸ್ವಾಗತಿಸಿ,ಕನ್ನಡ ಭಾಷಾ ಆಧ್ಯಾಪಕರಾದ ಧನರಾಜ್ ದೊಡ್ಡನೇರಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿನಿ ಶೈಮಾ ಅತಿಥಿಗಳ ಪ್ರಶಸ್ತಿ ಪತ್ರ ವಾಚಿಸಿದರು. ಖತೀಜತುಲ್ ಸಹಬೀರ ವಂದಿಸಿದರು. ಅಬ್ದುಲ್ ರಾಝಿಕ್ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…