ಪ್ರಮುಖ ಸುದ್ದಿಗಳು

ಕನ್ನಡ ಕಟ್ಟುವ ಕಾರ್ಯದಲ್ಲಿ ಗಡಿನಾಡ ಕೊಡುಗೆ ಪ್ರಮುಖ: ಚೇತನ್ ಮುಂಡಾಜೆ

ಕನ್ನಡವನ್ನು ಕಟ್ಟುವ ಹತ್ಯಾರಗಳು ಗಡಿನಾಡಿನಿಂದಲೇ ಹೆಚ್ಚಾಗಿ ಬಂದಿವೆ. ಇದಕ್ಕೆ ಇಲ್ಲಿಯ ಸಂದಿಗ್ಧತೆಗಳು ಕಾರಣ ಎಂದು ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅಭಿಪ್ರಾಯ ಪಟ್ಟರು. ಇಲ್ಲಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಾಷಾವಾಚಿಯಾಗಿಯೂ ಪ್ರದೇಶವಾಚಿಯಾಗಿಯೂ ಕನ್ನಡವನ್ನು ನಾವು ಗುರುತಿಸಬಹುದು. ಕರ್ನಾಟಕದ ಹೊರಗಿದ್ದು ಕನ್ನಡ ರಾಜ್ಯೋತ್ಸವ ಆಚರಿಸುವುದು ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ನುಡಿದರು.

ಗಡಿನಾಡನಲ್ಲಿದ್ದರೂ, ಹೊರರಾಜ್ಯದಲ್ಲಿದ್ದರೂ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು. ಭಾರತಾಂತರ್ಗತ ಕರ್ನಾಟಕ ಅನ್ನುವ ದೃಷ್ಟಿ ನಾಡಗೀತೆಯಲ್ಲಿ ಇದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಪ್ರಭಾರಿ ಡಾ. ಪ್ರವೀಣ ಪದ್ಯಾಣ ಹೇಳಿದರು. ವೇದಿಕೆಯ ಮೇಲೆ ಸಂಶೋಧನಾರ್ಥಿ ಶಶಾಂಕ ಹೆಚ್ ವಿ, ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿ ವಿನಯ ಎಂ ಹಾಗೂ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿನಿ ಚೇತನಾ ಕೆ ಉಪಸ್ಥಿತರಿದ್ದರು. ವಿವಿಧ ಕನ್ನಡಪರ ಗೀತೆಗಳ ಗಾಯನವನ್ನು ವಿಭಾಗದ ವಿವಿಧ ವಿದ್ಯಾರ್ಥಿ ತಂಡಗಳು ನಡೆಸಿಕೊಟ್ಟವು. ಸಂಶೋಧನಾರ್ಥಿ ಸೋಮ ನಿಂಗ ಹಿಪ್ಪರಗಿ ಸ್ವಾಗತಿಸಿ, ನಿರೂಪಿಸಿ, ವಿನಯ ಎಂ ವಂದಿಸಿದರು.

KANNADA RAJYOTSAVA HELD AT PERIYA KASARAGOD

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts