ಮಂಗಳೂರು: ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲಾಂತರ್ಗತ ಮಂಗಳೂರು ಹವ್ಯಕ ಮಂಡಲ, ವಿದ್ಯಾರ್ಥಿ-ಯುವ ವಿಭಾಗ ಮತ್ತು 12 ವಲಯಗಳ ಸಹಯೋಗದಲ್ಲಿ ಮಂಡಲೋತ್ಸವವು ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಬೆಳಗ್ಗೆ ರುದ್ರಾಭಿಷೇಕ ಪೂರ್ವಕ ಶಿವಾರಾಧನೆ ಮತ್ತು ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು. ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಸಂಜೆ ಮಂಡಲೋತ್ಸವದ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯದಂತೆ ವಲಯೋತ್ಸವ, ಮಂಡಲೋತ್ಸವ ನಡೆಸಲಾಗುತ್ತಿದೆ. ಸಂಘಟನೆಯೇ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಂಡಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಶ್ರೀ ಮಠದ ವಿವಿಧ ಯೋಜನೆಗಳು ನಾಡಿನ ಅಭ್ಯುದಯವನ್ನು ಅಪೇಕ್ಷಿಸಿ, ರೂಪಿಸಿದ್ದಾಗಿದೆ. ಅದಕ್ಕೆ ಸಮಾಜದ ಸಂಪೂರ್ಣ ಬೆಂಬಲ ಬೇಕಾಗಿದೆ ಎಂದರು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಅಧ್ಯಕ್ಷತೆ ವಹಿಸಿದ್ದರು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ್ ಭಟ್ ಮಿತ್ತೂರು, ಮಹಾಮಂಡಲ ಕೊಶಾಧಿಕಾರಿ ಅಂಬಿಕಾ ಎಚ್.ಎನ್., ಪ್ರಾಂತ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ವಿದ್ಯಾರ್ಥಿ ವಾಹಿನಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ಪ್ರಾಂತ ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್, ಸಂಘಟನ ಕಾರ್ಯದರ್ಶಿ ಕೃಷ್ಣಮೂರ್ತಿ ಕಮ್ಮಜೆ, ವೈದಿಕ ಪ್ರಧಾನ ಅಮೈ ಶಿವಪ್ರಸಾದ್ ಭಟ್, ಶಿಷ್ಯಮಾಧ್ಯಮ ಪ್ರಧಾನ ಪ್ರದೀಪ ಕೊಣಾಜೆ, ಸೇವಾ ಪ್ರಧಾನ ಸರೇಶ್ ಭಟ್ ಶಾಂತಿಮೂಲೆ, 12 ವಲಯಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತೀರ್ಪುಗಾರರು, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೈಗೋಳಿ ಸಾಯಿನಿಕೇತನ ಸೇವಾಶ್ರಮದ ಡಾ. ಉದಯ ಕುಮಾರ್ ನೂಜಿ, ಡಾ ಶಾರದಾ ದಂಪತಿ, ಡಾ.ಎಸ್.ಎಂ.ಶರ್ಮ, ಲತಾ ಶರ್ಮ ದಂಪತಿ, ಪ್ರಥ್ವೀಶ್ ಉಡುಪಿ ಹಾಗೂ ಶ್ರೀನಿಧಿ ಆರ್ ಎಸ್. ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಸಹಾಯ ಪ್ರಧಾನರಾದ ಭಾಸ್ಕರ ಹೊಸಮನೆ, ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಭಾರ್ಗವಿ ಕೊಲ್ಲೂರು, ಯುವ ಪ್ರಧಾನರಾದ ಕೃಷ್ಣಪ್ರಮೋದ ಶರ್ಮ ಹಾಗೂ ಮಾತೃ ಪ್ರಧಾನರಾದ ಮಲ್ಲಿಕಾ ಜಿ.ಕೆ. ಭಟ್ ಕಲ್ಲಡ್ಕ ಮತ್ತು ಯುವತಿ ಪ್ರಧಾನರಾದ ವೀಣಾ ಸರಸ್ವತಿ ಅವರು ಸನ್ಮಾನಪತ್ರ ಮತ್ತು ಬಹುಮಾನಿತರ ಪಟ್ಟಿ ವಾಚಿಸಿದರು. ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಇವರು ಸ್ವಾಗತಿಸಿದರು. ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಭಾರ್ಗವಿ ಕೊಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸರವು ರಮೇಶ್ ಭಟ್ ವಂದಿಸಿದರು. ಬೆಳಗ್ಗೆ ರುದ್ರಾಭಿಷೇಕ ಮತ್ತು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಬೌದ್ಧಿಕ, ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳು ನಡೆದವು. ಚಿಣ್ಣರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ-ಯುವತಿಯರು, ಮಾತೆಯರು, ಹಿರಿಯರು ಸೇರಿ ಒಟ್ಟು 400ಕ್ಕೂ ಅಧಿಕ ಮಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.