ಬಂಟ್ವಾಳ: ಬಂಟ್ವಾಳದ ಎಸ್.ವಿ.ಎಸ್. ದೇವಳ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹಾಗೂ ಎಸ್.ವಿ.ಎಸ್. ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಬಂಟ್ವಾಳ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು.
ಅಧ್ಯಕ್ಷತೆಯನ್ನು ಶ್ರೀ ದೇವಳ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ವಹಿಸಿ, ಕ್ರೀಡೆಗೆ ಸರಕಾರದ ಪ್ರೋತ್ಸಾಹ ಅಗತ್ಯ ಎಂದರು. ಉದ್ಘಾಟಕರಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಬಾಳಿಗಾ ಮಾತನಾಡಿ, ಕ್ರೀಡೆ ಸೋಲನ್ನು ಮೆಟ್ಟಿ ನಿಲ್ಲುವ ದೃಢತೆಯನ್ನು ಹೆಚ್ಚಿಸುತ್ತದೆ ಎಂದರು.
ಶ್ರೀ ದೇವಳದ ಮೊಕ್ತೇಸರರೂ ಶಾಲಾ ಸಂಚಾಲಕರೂ ಆದ ಭಾಮಿ ನಾಗೇಂದ್ರನಾಥ ಶೆಣೈ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಕಾರ್ಯದರ್ಶಿ ಸರ್ವೋತ್ತಮ ಬಾಳಿಗಾ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಪ್ರಸಾದ್ ರೈ, ವಲಯದ ನೋಡಲ್ ಜಗದೀಶ ರೈ ತುಂಬೆ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ, ರೋಶನಿ ತಾರಾ ಡಿಸೋಜಾ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಹಾಸ ಶೆಟ್ಟಿ, ವೇದಾವತಿ ಮತ್ತಿತರರು ಉಪಸ್ಥಿತರಿದ್ದರು. ಸುರೇಖಾ ಕೆ. ಸ್ವಾಗತಿಸಿ, ದಿನೇಶ್ ಕುಮಾರ್ ವಂದಿಸಿದರು. ಮುರಳೀಧರ ಪಿ. ಕಾರ್ಯಕ್ರಮ ನಿರ್ವಹಿಸಿದರು.