ಬಂಟ್ವಾಳ: ಶಂಭೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ನಿ. 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಬಿರುವೆರ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಪೂಜಾರಿ ನರಿಕೊಂಬು ಗ್ರಾ.ಪಂ. ಸದಸ್ಯರಾದ ರವಿ ಅಂಚನ್, ರಂಜಿತ್ ಕೆದ್ದೇಲ್ ಭಾಗವಹಿಸಿದ್ದರು.
ಸಂಘದ ನಿರ್ದೆಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ರಾಜೇಶ್ ಆರ್., ಅಶೋಕ್ ಆರ್., ಕೃಷ್ಣಪ್ಪ ಪೂಜಾರಿ, ಗಣೇಶ್ ಪೆಲತ್ತಿಮಾರ್, ಶ್ರೀಶ ಆರ್., ನಾರಾಯಣ ಪೂಜಾರಿ ಕೇದಿಗೆ, ವಿಜಯ ತುಕರಾಮ, ಜಯಂತಿ ಈಶ್ವರ ಪೂಜಾರಿ ಉಪಸ್ಥಿತರಿದ್ದರು. ಮೂರ್ತೆದಾರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಪಾಧ್ಯಕ್ಷ ಮಾಧವ ಕೆ. ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ಅಮೀನ್ ನಿರೂಪಿಸಿದರು. ಸಿಬ್ಬಂದಿ ಕೃತಿಕ್ಷಾ ವಂದಿಸಿದರು. ಸಂಘದ ಪಿಗ್ಮಿ ಸಂಗ್ರಹಕ ರಘು ಎಂ., ಆಭರಣ ಪರಿವೀಕ್ಷಕ ನಾಗೇಶ್ ಆಚಾರ್ಯ ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…