ಬಂಟ್ವಾಳ: ಹಿಂದು ಸಂಘಟನೆಗಳು ಸೋಮವಾರ ಬಿ.ಸಿ.ರೋಡ್ ಚಲೋ ಹಮ್ಮಿಕೊಂಡಿದ್ದು, ಅಲ್ಲಿಗೆ ಶರಣ್ ಪಂಪ್ ವೆಲ್ ಆಗಮಿಸಿದರು. ಬಳಿಕ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸವಾಲು ಹೊಸದಲ್ಲ, ಇದನ್ನು ಸ್ವೀಕರಿಸಿ ಬಂದಿದ್ದೇನೆ, ಇಂಥ ಸವಾಲುಗಳನ್ನು ಇನ್ನಷ್ಟು ಬಂದರೆ ಎದುರಿಸಲು ಹಿಂದು ಸಮಾಜ ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದಕ್ಕೂ ಮುನ್ನ ಬೆಳಗ್ಗಿನಿಂದಲೇ ರಕ್ತೇಶ್ವರಿ ದೇವಸ್ಥಾನ ಮುಂಭಾಗ ಸೇರಿದ್ದ ಹಿಂದು ಸಂಘಟನೆಗಳ ಕಾರ್ಯಕರ್ತರು, ಶರಣ್ ಪಂಪ್ ವೆಲ್ ಆಗಮಿಸಿದ ನಂತರ, ಜೈಕಾರ ಘೋಷಣೆ ಕೂಗುತ್ತಾ, ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿ, ಆಕ್ರೋಶ ವ್ಯಕ್ತಪಡಿಸಿದರು. ಇದಾದ ಬಳಿಕ ಶರಣ್, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ಪುನೀತ್ ಅತ್ತಾವರ, ಪ್ರಸಾದ್ ಕುಮಾರ್ ರೈ, ವಿಕಾಸ್ ಪುತ್ತೂರು, ಸಂದೇಶ್ ಶೆಟ್ಟಿ, ಭಾಸ್ಕರ ಧರ್ಮಸ್ಥಳ, ನವೀನ್ ನೆರಿಯ, ನರಸಿಂಹ ಮಾಣಿ, ಮಹೇಶ್ ಬೈಲೂರು, ಪ್ರಶಾಂತ್ ಕೆಂಪುಗುಡ್ಡೆ, ಸಮೀತ್ ರಾಜ್ ಧರೆಗುಡ್ಡೆ, ತಿರುಲೇಶ್ ಬೆಳ್ಳೂರು, ಗುರುರಾಜ ಬಂಟ್ವಾಳ, ಆರ್. ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲಿಯಾನ್ ಸಹಿತ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಪೊಲೀಸ್ ಐಜಿಪಿ ಅಮಿತ್ ಸಿಂಗ್,ಎಸ್.ಪಿ.ಯತೀಶ್ ಎನ್, ಅಡಿಶನಲ್ ಎಸ್ಪಿ ರಾಜೇಂದ್ರ ಡಿ.ಎಸ್, ಡಿವೈಎಸ್ಪಿ ವಿಜಯ ಪ್ರಸಾದ್,.ಸಹಾಯಕ ಕಮೀಷನರ್ ಹರ್ಷವರ್ದನ್,ತಹಸೀಲ್ದಾರ್ ಅರ್ಚನಾ ಭಟ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.