ಇದು ಬಿ.ಸಿ.ರೋಡ್ ಸರ್ಕಲ್ ದೃಶ್ಯ. ಪ್ರಖರ ಬಿಸಿಲಿದ್ದರೆ, ನೀರು ಖಾಲಿಯಾಗುತ್ತದೆ. ಮಳೆ ಬಂದರೆ ಮತ್ತೆ ಹೀಗೆ ಇರುತ್ತದೆ. ವಾಹನಸವಾರರು ಈ ಸುತ್ತುವರಿದು ಸಂಚರಿಸುವುದರಿಂದ ಯಾವುದೇ ಅಪಾಯ ಉಂಟಾಗದಂತೆ ಸುತ್ತ ಟೇಪನ್ನು ಅಳವಡಿಸಿದ್ದಾರೆ. ವೃತ್ತ ನಿರ್ಮಾಣಕ್ಕೆ ಜೆಸಿಬಿ ಮೂಲಕ ಅಗೆದ ಪರಿಣಾಮ ಪುರಸಭೆಯ ಕುಡಿಯುವ ನೀರು ಪೂರೈಕೆಯ ಕೊಳವೆಗಳಿಗೆ ಹಾನಿಯಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅವರು ವೃತ್ತ ನಿರ್ಮಾಣದ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಇಲಾಖಾ ಇಂಜಿನಿಯರ್ ಅವರಿಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ರಾ.ಹೆ. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಪಂಪ್ ಅಳವಡಿಸಿ ನೀರನ್ನು ಟ್ಯಾಂಕರ್ ಗೆ ತುಂಬಿಸಿ ಖಾಲಿ ಮಾಡಿದ್ದಾರೆ. ಈ ನೀರಿನ ಒರತೆಯು ಇರುವುದರಿಂದ ನೀರು ಖಾಲಿ ಮಾಡಿಷ್ಟು ಸ್ಥಳದಲ್ಲಿ ನೀರು ತುಂಬುತ್ತಲೇ ಇತ್ತು. ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ವೇಳೆ ಇಂಥದ್ದೇನಾದರೂ ಯಡವಟ್ಟುಗಳು ಆಗುತ್ತಲೇ ಇವೆ.