ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, 5.71 ಕೋಟಿ ರೂ ಲಾಭ ಘೋಷಣೆ, ಸದಸ್ಯರಿಗೆ ಶೇ.17 ಲಾಭಾಂಶ
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳದ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದ ಬಳಿ ಇರುವ ಸ್ಪರ್ಶಾ ಕಲಾ ಮಂದಿರ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯಲ್ಲಿ 2023-24ನೇ ಸಾಲಿಗೆ ಶೇ 17ರಂತೆ ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು.
ಸಂಘದಲ್ಲಿ 8660 ಸದಸ್ಯರಿದ್ದು ಪಾಲು ಬಂಡವಾಳ ರೂ. 7.87 ಕೋಟಿ, ಠೇವಣಾತಿಗಳು ರೂ. 214.26 ಕೋಟಿ, ನಿಧಿಗಳು 15.68 ಕೋಟಿ, ವಿನಿಯೋಗಗಳು 59.82 ಕೋಟಿ, ಸಾಲಗಳು ರೂ. 192.78 ಕೋಟಿ, ವಸೂಲಾತಿ ಶೇಕಡ 95.02 ಆಗಿರುತ್ತದೆ. 2023-24ನೇ ಸಾಲಿನಲ್ಲಿ ರೂ. 982.54 ಕೋಟಿ ರೂ ವ್ಯವಹಾರ ನಡೆಸಿ ರೂ. 5.71 ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 239.90 ಕೋಟಿ ಆಗಿರುತ್ತದೆ. ಅಡಿಟ್ ವರ್ಗೀಕರಣದಲ್ಲಿ ’ಎ’ ತರಗತಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಉಪಾಧ್ಯಕ಼ರಾದ ಪದ್ಮನಾಭ ವಿ. ಹಾಗೂ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಕೆ. ಬಿ., ಅರುಣ್ ಕುಮಾರ್, ಜನಾರ್ಧನ ಕುಲಾಲ್, ಬಿ. ರಮೇಶ್ ಸಾಲ್ಯಾನ್, ಸತೀಶ, ಸುರೇಶ್ ಎನ್., ರಮೇಶ್ ಸಾಲ್ಯಾನ್, ನಾಗೇಶ್ ಬಿ., ವಿ. ವಿಜಯ್ ಕುಮಾರ್, ಎಮ್. ಕೆ ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ಜಯಂತಿ, ವಿದ್ಯಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಬಿ. ರಮೇಶ್ ಸಾಲ್ಯಾನ್ ಸ್ವಾಗತಿಸಿದರು ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಮ್. ಕೆ. ವಾರ್ಷಿಕ ವರದಿಯನ್ನು ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯ ಲೆಕ್ಕ ಪತ್ರಗಳನ್ನು ಮಂಡಿಸಲಾಗಿ ಸಭೆಯಲ್ಲಿ ಮಂಜೂರಾತಿಯನ್ನು ಪಡೆಯಲಾಯಿತು. ಸಂಘದ ಈ ತನಕದ ಪ್ರಗತಿ ಮುಂಬರುವ ದಿನಗಳಲ್ಲಿ ಸದಸ್ಯರ ಸಹಕಾರ ಆಡಳಿತ ಮಂಡಳಿಯ ಯೋಚನೆ ಮತ್ತು ಯೋಜನೆಯನ್ನು ಅಧ್ಯಕ಼ರು ಸಭೆಯ ಮುಂದಿಟ್ಟು ಸದಸ್ಯರ ಸಲಹೆಯನ್ನು ಪಡೆದು ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. ಸದಸ್ಯರು ಸಲಹೆ ಸೂಚನೆ ನೀಡಿದರು ಮತ್ತು ವ್ಯವಸ್ಥಾಪಕರಾದ ವಿನೋದ್ ಕುಮಾರ್ ಸಹಕರಿಸಿದರು.