ಬಂಟ್ವಾಳ: ರಸ್ತೆ ಸಮತಟ್ಟು ಮಾಡುವ ಡೋಸರ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ರಭಸಕ್ಕೆ ಸ್ಟೇರಿಂಗ್ ಕಡಿತಗೊಂಡು ರಸ್ತೆ ಮಧ್ಯದಲ್ಲಿ ಬಾಕಿಯಾಗಿ ನಿಂತ ಘಟನೆ ಬುಧವಾರ ಬೆಳಗ್ಗೆ ಪಾಣೆಮಂಗಳೂರಿನಲ್ಲಿ ನಡೆಯಿತು.
ಬಿಸಿರೋಡಿನ ಕಡೆಯಿಂದ ಬರುತ್ತಿದ್ದ ಪಾರ್ಸೆಲ್ ಸಾಮಾಗ್ರಿಗಳನ್ನು ಕೊಂಡುಹೋಗುವ ಲಾರಿ ಪಾಣೆಮಂಗಳೂರು ಸೇತುವೆ ಕಳೆದು ಮುಂದೆ ಹೋಗುತ್ತಿದ್ದ ವೇಳೆ ಡೋಸರ್ ವಾಹನಕ್ಕೆ ಡಿಕ್ಕಿಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ಟೇರಿಂಗ್ ತುಂಡಾದ ತಕ್ಷಣ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಕಾಮಗಾರಿಗಾಗಿ ರಸ್ತೆಯ ಬದಿಯಲ್ಲಿ ತಾತ್ಕಾಲಿಕವಾಗಿ ಇಟ್ಟಿರುವ ಡಿವೈಡರ್ ಗೆ ಡಿಕ್ಕಿಯಾಗಿ ನಿಂತಿತ್ತು. ಘಟನೆ ಬೆಳಿಗ್ಗೆ ಸುಮಾರು 7 ಗಂಟೆಗೆ ನಡೆದಿದ್ದು, ಘಟನೆಯ ಬಳಿಕ ಎರಡು ಗಂಟೆಗಳ ಕಾಲ ನಿರಂತರವಾಗಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಶಾಲಾ ಮಕ್ಕಳು ಸಹಿತ ಕೆಲಸಕ್ಕೆ ಹೋಗುವವರು ಪರದಾಟ ಅನುಭವಿಸಬೇಕಾಯಿತು. ಟ್ರಾಫಿಕ್ ಎಸ್.ಐ. ಮತ್ತು ಸಿಬಂದಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.