ವಿಟ್ಲ: ವಿಟ್ಲ ಪಟ್ಟಣ ಪಂಚಾಯತಿಯ ಮುಂದಿನ ಎರಡೂ ವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ಕರುಣಾಕರ ಗೌಡ ನಾಯ್ತೊಟ್ಟು ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ. ಸಂಗೀತಾ ಪಾಣೆಮಜಲು ಬಹುಮತ ಪಡೆದು ಆಯ್ಕೆ ಆಗಿದ್ದಾರೆ
18 ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 12, ಕಾಂಗ್ರೆಸ್ ಐದು ಹಾಗೂ ಓರ್ವ ಎಸ್ ಡಿ ಪಿ ಐ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕರುಣಾಕರ ಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸಂಗೀತಾ ಪಾಣೆಮಜಲು ಮತ್ತು ಕಾಂಗ್ರೆಸ್ ನ ಪದ್ಮಿನಿ ನಾಮಪತ್ರ ಸಲ್ಲಿಸಿದ್ದರು. ಸಂಸದ ಬ್ರಿಜೇಶ್ ಚೌಟರ ಮತ ಸೇರಿದಂತೆ ಬಿಜೆಪಿ ಅಭ್ಯರ್ಥಿ 13 ಮತ ಗಳಿಸಿ ಜಯಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರು ಮತ ಗಳಿಸಿದರು. ತಹಶಿಲ್ದಾರ್ ಅರ್ಚನಾ ಭಟ್,
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.