ಬಂಟ್ವಾಳ ತಾಲೂಕು ಕಚೇರಿಯಲ್ಲಿ ಶ್ರೀಕೃಷ್ಣಜಯಂತಿ ಆಚರಣೆ ನಡೆಯಿತು. ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸ್ಥಾನೀಯ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ಶ್ರೀಕೃಷ್ಣನದು ಜಗತ್ತೇ ವಂದಿಸುವಂತಹ ವ್ಯಕ್ತಿತ್ವ. ಮಗುವಾಗಿ, ಸ್ನೇಹಿತನಾಗಿ, ಭಗವದ್ಗೀತೆಯ ಬೋಧಕನಾಗಿ ಅವನು ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ ಎಂದು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲ್ಪಟ್ಟ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬಂಟ್ವಾಳ ತಾಲೂಕು ಯಾದವ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಮಾತನಾಡಿ, ಅವತಾರ ಪುರುಷರು ಜನಿಸಿದಾಗ ಮನುಕುಲವನ್ನೇ ರಕ್ಷಣೆ ಮಾಡುತ್ತಾರೆ. ಆದರೆ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ದೈವತ್ವಕ್ಕೆ ಸಂಪೂರ್ಣ ಶರಣಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪತಹಸೀಲ್ದಾರರಾದ ರಾಜೇಶ್ ನಾಯ್ಕ್ ಎನ್ ಎಮ್, ದಿವಾಕರ ಮುಗುಲ್ಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್,
ದ ಕ ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರಾದ ಎಸ್ ಗೋಪಾಲ್, ದ ಕ ಜಿಲ್ಲಾ ಯಾದವ ಸಂಘದ ಕೋಶಾಧಿಕಾರಿ ಚಂದ್ರಶೇಖರ್ ಅಳಿಕೆ, ತಾಲೂಕು ಯಾದವ ಸಂಘದ ಪ್ರತಿನಿಧಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಯವರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಉಪತಹಸೀಲ್ದಾರರಾದ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಆಡಳಿತ ಅಧಿಕಾರಿ ದಿವ್ಯಾ ಪ್ರಾರ್ಥಿಸಿದರು. ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿದರು, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾದ ಜನಾರ್ಧನ್ ವಂದಿಸಿದರು.