ಸಾರ್ವಜನಿಜರು ಶಿಬಿರದ ಪ್ರಯೋಜನ ಪಡೆದುಕೊಂಡಾಗ ಆರೋಗ್ಯ ಶಿಬಿರಗಳು ಅರ್ಥಪೂರ್ಣವಾಗುತ್ತದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯ ಡಾ. ಶ್ರೇಯಸ್ ದೊಡ್ಡಿಹಿತ್ಲು ಹೇಳಿದರು.
ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯ ಇದರ ಆಶ್ರಯದಲ್ಲಿಭಂಡಾರಿ ಸಮಾಜ ಸಂಘ ಅಜೆಕಲ ಬಂಟ್ವಾಳ, ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಬಂಟ್ವಾಳ ಕ್ಷೇತ್ರ, ದೈವಗುಡ್ಡೆ ಫ್ರೆಂಡ್ಸ್ ಬಡ್ಡಕಟ್ಟೆ ಬಂಟ್ವಾಳ ಸಹಕಾರದಲ್ಲಿ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳದೇವಿ ಇವರ ಸಹಯೋಗದೊಂದಿಗೆಅತ್ತಾವರ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಶಿಬಿರ, ದೇರಳಕಟ್ಟೆಯ ಯೆನಪೋಯ ದಂತ ವೈದ್ಯಕೀಯ ಆಸ್ಪತ್ರೆಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ, ಇಂಡಿಯನ್ ರೆಡ್ ಕ್ತಾಸ್ ಸೊಸೈಟಿ ಮಂಗಳೂರು ಇವರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು \ಮಾತನಾಡಿದರು.
ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ಯಾರೇಜು ಮಾಲಕರ ಸಂಘದ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರ ಉಪಯೋಗದ ಉದ್ದೇಶದಿಂದ ಈ ಆರೋಗ್ಯ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಂಡಾರಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ದಿವಾಕರ ಶಂಭೂರು, ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇದರ ಸಂಚಾಲಕ ಸುರೇಶ್ ಬೈಂದೂರು, ಭಂಡಾರಿವಸಮಾಜ ಸೇವಾ ಸಂಘದ ಅಧ್ಯಕ್ಷಚ ಗೋಪಾಲ ಭಂಡಾರಿ ಪುನ್ಕೆದಡಿ, ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಕೆ ಎಸ್ ಟಿಎ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ನಾಗೇಶ್ , ದೈವಗುಡ್ಡೆ ಫ್ರೆಂಡ್ಸ್ ಸಂಚಾಲಕ ಶ್ರೀನಿವಾಸ ಶೆಟ್ಟಿ
ಕೆ.ಎಂ.ಸಿ. ಆಸ್ಪತ್ರೆಯ ಡಾ. ಸುಚರಿತ, ಎನಪೋಯ ಆಸ್ಪತ್ರೆಯ ಡಾ. ಪ್ರಮಾದ ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ಸಿದ್ದಿಕ್ ಮೆಲ್ಕಾರ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರಶಾಂತ್ ಭಂಡಾರ್ ಕಾರ್ ವಂದಿಸಿದರು. ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.