ಪಂಚಗ್ಯಾರಂಟಿ ಯೋಜನೆ ಅನುಷ್ಠಾನದ ವೇಳೆ ಯಾವ ಅರ್ಹ ಫಲಾನುಭವಿಯೂ ಬಿಟ್ಟುಹೋಗಬಾರದು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆರಂಭಗೊಂಡ ರಾಜ್ಯ ಸರಕಾರದ ಮಹತ್ವದ ಘೋಷಣೆಗಳಾದ ಪಂಚ ಗ್ಯಾರಂಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆಂದು ಆರಂಭಿಸಲಾದ ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಶುಭ ಹಾರೈಸಿದ ಅವರು, ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಲು ಸಲಹೆ ನೀಡಿದರು.
ಈ ಸಂದರ್ಭ ಅಧ್ಯಕ್ಷೆ ಜಯಂತಿ ಪೂಜಾರಿ ಮಾತನಾಡಿ, ಬಂಟ್ವಾಳದಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳನ್ನು ಹುಡುಕಿ ಅವರಿಗೆ ಅರ್ಹವಾಗಿ ದೊರಕಬೇಕಾದ ಅವಶ್ಯಕತೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಪಂಚಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಈಗಾಗಲೇ ಅಧಿಕಾರಿಗಳು ಶೇ. 90 ರಷ್ಟು ಅನುಷ್ಠಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ಸಮಾವೇಶವಾದ ಗ್ಯಾರಂಟಿ ಮೇಳ ಮಾಡುವ ಇರಾದೆ ಇದೆ ಎಂದು ಹೇಳಿದರು.
ಬಂಟ್ವಾಳ ಸಮಿತಿ ಅಧ್ಯಕ್ಷರು, ಸದಸ್ಯರು ಇವರು:
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ಬಂಟ್ವಾಳದಲ್ಲಿ ಅಧ್ಯಕ್ಷರಾಗಿ ಜಯಂತಿ ವಿ.ಪೂಜಾರಿ, ಸದಸ್ಯ ಕಾರ್ಯದರ್ಶಿಯಾಗಿ ತಾಪಂ ಇಒ ಸಚಿನ್ ಕುಮಾರ್, ಸದಸ್ಯರಾಗಿ ಸುಧೀಂದ್ರ ಶೆಟ್ಟಿ, ಮಹಮ್ಮದ್ ಸಿರಾಜ್ ಎಂ.ಯು, ಸತೀಶ್, ಮುರಳೀಧರ ವೈ, ವಿನಯಕುಮಾರ್, ಕಾಂಚಲಾಕ್ಷಿ, ಐಡಾ ಸುರೇಶ್, ಹರ್ಷನ್ ಬಿ, ಪವಿತ್ರಾ ಕೆ, ಚಂದ್ರಶೇಖರ ಆಚಾರ್ಯ, ಅಬ್ದುಲ್ ಮಜೀದ್, ಜನಾರ್ದನ ಸಪಲ್ಯ, ಕೃಷ್ಣಪ್ಪ ಪೂಜಾರಿ, ಎನ್.ಅಬ್ದುಲ್ ಕರೀಂ ಕಾರ್ಯನಿರ್ವಹಿಸಲಿದ್ದಾರೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಸಚಿನ್ ಕುಮಾರ್ ಮಾತನಾಡಿ ಸಮಿತಿಯ ಉದ್ದೇಶಗಳನ್ನು ವಿವರಿಸಿದರು. ಈ ಸಂದರ್ಭ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಎಂ.ಎಸ್.ಮಹಮ್ಮದ್, ಪದ್ಮನಾಭ ರೈ, ಮಲ್ಲಿಕಾ ಶೆಟ್ಟಿ, ಬಿ.ಎಂ.ಅಬ್ಬಾಸ್ ಆಲಿ, ಸುದರ್ಶನ ಜೈನ್ ಪಂಜಿಕಲ್ಲು, ಮಾಯಿಲಪ್ಪ ಸಾಲಿಯಾನ್, ಸುರೇಶ್ ನಾವೂರ ಸಹಿತ ಕಾಂಗ್ರೆಸ್ ಪಕ್ಷದ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.