ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಅನಿವಾಸಿ ಉದ್ಯಮಿ ನಾಸಿರ್ ಹುಸೈನ್ ಕಲಾಬಾಗಿಲು, ಸಮಾಜ ಸೇವಕ ಎಸ್.ಪಿ.ರಫೀಕ್ ರವರ ಸಾರಥ್ಯದಲ್ಲಿ ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ ಬಂದಿದೆ.
ಇದರ ಪ್ರಥಮ ಸಭೆ ನಾಸಿರ್ ಹುಸೈನ್ ಕಲಾಬಾಗಿಲು ಅವರ ಅಧ್ಯಕ್ಷತೆಯಲ್ಲಿ, ಬಿ.ಜೆ.ಎಂ ಇರ್ವತ್ತೂರುಪದವು ಮಸೀದಿಯ ಖತೀಬರಾದ ಗೌರವಾನ್ವಿತ ಉಮರ್ ಮದನಿಯವರ ದುಆ ಮತ್ತು ರಫೀಕ್ ಮದನಿಯವರ ಹಿತವಚನಗಳೊಂದಿಗೆ ಇರ್ವತ್ತೂರಿನ ಎಸ್.ಪಿ.ಕಾಟ್ಟೇಜ್ ನಲ್ಲಿ ನಡೆಯಿತು. ಪ್ರಥಮ 2024-2027ರ ಅವಧಿಗೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ನಾಸಿರ್ ಹುಸೈನ್ ಕಲಾಬಾಗಿಲು, ಗೌರವ ಸಲಹೆಗಾರರಾಗಿ ಅಮೀನ್ ಪಂಜೋಡಿ ಮತ್ತು ಎಸ್.ಪಿ.ಸಲೀಂ, ಅಧ್ಯಕ್ಷರಾಗಿ ಎಸ್ ಪಿ ರಫೀಕ್, ಉಪಾಧ್ಯಕ್ಷರಾಗಿ:ಮುಹಮ್ಮದ್ ಝಹೀರ್ ಎಡ್ತೂರ್ ಮತ್ತು ಫರೀದ್ ಅಹ್ಮದ್ ಎಡ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕಲಾಬಾಗಿಲು, ಉಪಕಾರ್ಯದರ್ಶಿಯಾಗಿ ನಿಸಾರ್ ಬಿ.ಎಸ್.ನಗರಕೋಶಾಧಿಕಾರಿಯಾಗಿ ನಯಾಝ್ ಕಲಾಬಾಗಿಲು, ಹಾಗೂ ಟ್ರಸ್ಟ್ ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಕಲಾಬಾಗಿಲು (ದುಬೈ), ಸುಲೈಮಾನ್ ಅಗಲೋಡಿ, ಹಾಮದ್ ಅಗಲೋಡಿ, ಹಂಝ ಅಗಲೋಡಿ ,ಪಿ.ಎಚ್.ಅಬ್ಬಾಸ್ ಇರ್ವತ್ತೂರು ಪದವು, ಅಶ್ರಫ್ ಸುಪಾರಿ ಇರ್ವತ್ತೂರು ಪದವು, ಮನ್ಸೂರ್ ಇರ್ವತ್ತೂರು ಪದವು (ದುಬೈ), ಎಸ್.ಎಮ್.ವಸೀಂ ವಾಮದ ಪದವು, ಝಾಕಿರ್ ಹುಸೈನ್ ಇರ್ವತ್ತೂರು ಪದವು ,ನಿಸಾರ್ ಅಹ್ಮದ್ ಮಾಸ್ಟರ್ ಇರ್ವತ್ತೂರು ಪದವು ,ಝಹೀರ್ ಇರ್ವತ್ತೂರು ಪದವು,ಅಝರ್ ಪಂಜೋಡಿ ಮತ್ತು ಝಮೀರ್ ಇರ್ವತ್ತೂರು ಪದವು ಇವರು ಆಯ್ಕೆ ಯಾದರು.ಅನಿವಾಸಿ ಉದ್ಯಮಿ ನಾಸಿರ್ ಕಲಾಬಾಗಿಲು ಪ್ರಸ್ತಾವಿಕವಾಗಿ ಮಾತನಾಡಿದರು.ಸಿದ್ದೀಕ್ ಕಲಾಬಾಗಿಲು ಸ್ವಾಗತಿಸಿ, ಪ್ರಥಮ ಸಭೆಯ ಪ್ರಕ್ರಿಯೆ ನಡೆಸಿದರು.ನಿಸಾರ್ ಬಿ.ಎಸ್.ನಗರ ಇವರ ಧನ್ಯವಾದಗಳೊಂದಿಗೆ ಸಭೆಯು ಮುಕ್ತಾಯಗೊಂಡಿತು.