ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಮಧ್ಯಾನ- ಭಜನೆ- ಪ್ರವಚನ ಸಂಪನ್ನಗೊಂಡಿತು.ಊರ ಪರ ಊರ 12 ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರಾಮಾಯಣ ಮಾಸಾಚರಣೆಯ ಪ್ರಯುಕ್ತ ವಿಶೇಷ ಭಜನೆ ನಡೆಯಿತು.
ಆ ಬಳಿಕ ಸಂಜೆಶ್ರೀ ದಾಮೋದರ ಶರ್ಮಾ ಬಾರ್ಕೂರು ಇವರಿಂದ ಭಗವಾನ್ ಶ್ರೀ ರಾಮನ ಆದರ್ಶಗಳ ಕುರಿತಾದ ಪ್ರವಚನ ನಡೆಯಿತು.ಶ್ರೀರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ಭರತನ ಭಾತೃಪ್ರೇಮ ,ಸೀತೆಯ ಪಾತಿವೃತ್ಯ ಲಕ್ಷ್ಮಣನ ಸಹೋದರ್ಯದ ಪ್ರೀತಿ ಇತ್ಯಾದಿ ವಿಚಾರಗಳು ಮನಮುಟ್ಟುವಂತೆ ಶರ್ಮಾರವರು ವಿವರಿಸಿದ್ದರು.
ಶ್ರೀ ರಾಮನ ಆದರ್ಶವನ್ನು ಜೀವನದಲ್ಲಿ ಪಾಲಿಸಿದಲ್ಲಿ ಪ್ರತೀ ಕುಟುಂಬಗಳು ಸುಖ ನೆಮ್ಮದಿಯಿಂದ ಬಾಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು..ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರು ಧಾರ್ಮಿಕತೆ ಸಾಂಸ್ಕೃತಿಕತೆ ಎಲ್ಲವೂ ಜೊತೆಗೂಡಿನಲ್ಲಿ ಒಂದು ಸಾನಿಧ್ಯ ವೃದ್ಧಿಸಬಹುದು. ಅದಕ್ಕೆ ಸಿರಿಬಾಗಿಲು ಪ್ರತಿಷ್ಠಾನವೇ ಆದರ್ಶ. ಪ್ರತಿಷ್ಠಾನದ ಚಟುವಟಿಕೆಗಳು ಗಡಿನಾಡು ಕಾಸರಗೋಡಿನಲ್ಲಿ ಎಲ್ಲರಿಗೂ ಒಂದು ಆದರ್ಶಪ್ರಾಯವಾಗಿದೆ. ಮುಂದೆ ಯಶಸ್ವಿಯಾಗಲಿ ಎಂದು ಹಾರೈಸಿದರು