ಬಂಟ್ವಾಳ

ಬಾಳ್ತಿಲ ಗ್ರಾಮದಲ್ಲಿ ಮಕ್ಕಳಿಗೆ ಭತ್ತ ನೇಜಿ ನಾಟಿ ಪ್ರಾತ್ಯಕ್ಷಿಕೆ, ಕಾರ್ಯಾನುಭವ

ಬಂಟ್ವಾಳ: ಶನಿವಾರ ಬಂಟ್ವಾಳ ತಾಲೂಕು ಪಾಣೆಮಂಗಳೂರು ಹೋಬಳಿ ಬಾಳ್ತಿಲ ಗ್ರಾಮದ ಕೋರ್ಯ ಮಹಮ್ಮಾಯಿ ದೈವಸ್ಥಾನದ ಗದ್ದೆಯಲ್ಲಿ ಮೀಟರ್‌ ತಳಿಯ ಭತ್ತ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.ನೀರಪಾದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಕಾರ್ಯಕ್ರಮ ನೆರವೇರಿತು.

ಭತ್ತ ನೇಜಿ ನಾಟಿ ಕಾರ್ಯವನ್ನು ಶಾಲೆಯ ಪಠ್ಯೇತರ ಚಟುವಟಿಕೆ ಕೃಷಿ ಶಿಕ್ಷಣ ಅಂಗವಾಗಿ ಜರುಗಿದ ಈ ಕಾರ್ಯಕ್ರಮವನ್ನು ನೀರಪಾದೆ ಹಿ.ಪ್ರಾ. ಶಾಲೆ ಹಾಗೂ ಸ್ಥಳೀಯ ಉತ್ಸಾಹಿ ಯುವ ಕೃಷಿಕರ ನೆರವಿನೊಂದಿಗೆ ಜಂಟಿಯಾಗಿ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಶಿಕ್ಷಕ ಸಂತೋಷ್‌ ಕುಮಾರ್‌, ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವಿಚಂದ್ರ ಕೋರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕೃಷಿ ಅಧಿಕಾರಿ ನಂದನ್‌ ಶೆಣೈ, ಶಾಲಾ ಮಕ್ಕಳಿಗೆ ಭತ್ತ ಕೃಷಿಯ ಮಹತ್ವ ಹಾಗೂ ನೇಜಿ ನಾಟಿ ಕಾರ್ಯದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಎಸ್.‌ ಭತ್ತ ಬೇಸಾಯದಲ್ಲಿಮಕ್ಕಳ ಪಾಲ್ಗೊಳ್ಳುವಿಕೆ ಕುರಿತು ವಿವರಿಸಿದರು.

ರೈತರಾದ ಯಾದವ ಪೂಜಾರಿ ಕೋರ್ಯ ಭತ್ತ ಹಾಗೂ ಅಕ್ಕಿಯ ಅಳತೆಗೋಲುಗಳಾದ ಪಾವು, ಸೇರು, ಕಲಸೆ, ಮುಡಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಕೃಷಿಕರಾದ ವಿನ್ಸೆಂಟ್‌ ಲಸ್ರಾದೋ ಭತ್ತ ಕೃಷಿಯ ಅಳಿವು ಉಳಿವು ಹಾಗೂ ಜಾಗೃತಿಯನ್ನುಮಕ್ಕಳಲ್ಲಿ ಮೂಡಿಸಿದರು. ರೈತ ಮುಖಂಡರಾದ ಪ್ರೇಮನಾಥ ಶೆಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಯೋಗಿಕ ಕೃಷಿ ಮಾಹಿತಿಯ ಅಗತ್ಯತೆ ಕುರಿತು ಮಾಹಿತಿ ನೀಡಿದರು.  ಬಾಳ್ತಿಲ ಕೃಷಿ ಸಖಿ ಗುಲಾಬಿ ಭತ್ತದ ಬೀಜೋಪಚಾರ ಕುರಿತು ಮಾಹಿತಿ ನೀಡಿದರು. ಲಲಿತ ಮಕ್ಕಳು ಭತ್ತ ನಾಟಿ ಮಾಡುವ ವೇಳೆ ಪಾರಂಪರಿಕ ಸಂದಿ ಹಾಡುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ