ದುಂದುವೆಚ್ಚ ಮಾಡಿ ಅದ್ದೂರಿ ಹುಟ್ಟುಹಬ್ಬವಬದಲು ಸಮಾಜದ ಬಡಜನರಿಗೆ ಸಹಾಯ ಮಾಡಿ ಅರ್ಥಪೂರ್ಣವಾಗಿ ಆಚರಿಸಿ. ಜನ ಮತ್ತು ಧನ ಎರಡೂ ಒಂದಕ್ಕೊಂದು ಸಂಬಂಧ ಇರುವಂಹದ್ದು. ಜನರು ಧನವನ್ನು ಹೇಗೆ ವಿನಿಯೋಗ ಮಾಡುತ್ತಾರೆ ಎಂಬುದರ ಮೇಲೆ ಜೀವನ ಯಶಸ್ಸು ನಿಂತಿದೆ ಎಂದು ಒಡಿಯೂರು ಶ್ರೀಗುರುದೇವ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು
ಅವರು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಪ್ರಯುಕ್ತ ಒಡಿಯೂರು ಸಂಸ್ಥಾನದ ಆತ್ರೇಯ ಮಂಟಪದಲ್ಲಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸೇವಾ ಕಾರ್ಯಗಳ ಮೂಲಕ ಸಮಾಜ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಎಂದು ಅವರು ಕರೆ ನೀಡಿದರು
ಅವಿಸ್ಮರಣೀಯ ಕೊಡುಗೆ: ಶ್ರೀ ಮಾತಾನಂದ ಮಯಿ
ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಒಡಿಯೂರು ಶ್ರೀಗಳ ಕೊಡುಗೆ ಅವಿಸ್ಮರಣೀಯ. ಸಮಾಜಸೇವೆ ಮಾಡಲು ಭಗವಂತ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಸಾಧ್ವಿ ಶ್ರೀ ಮಾತಾನಂದ ಮಯಿ ತಿಳಿಸಿದರು
ಸಂಘಟನೆ ಬಲಗೊಳ್ಳಲಿ: ಮಾಣಿಲಶ್ರೀ
ಇಂತಹ ಕಾರ್ಯಕ್ರಮಗಳು ಹಿಂದೂ ಸಮಾಜ ಒಗ್ಗೂಡುವಿಕೆಗೆ ಸಹಕಾರಿ ಆಗಲಿ ಹಿಂದೂ ಸಂಘಟನೆಗಳು ಇನ್ನಷ್ಟು ಬಲಗೊಳ್ಳಲಿ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಗಣ್ಯರ ಉಪಸ್ಥಿತಿ
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕಡಂದಲೆ ಪರಾರಿ ಪ್ರಕಾಶ ಎಲ್. ಶೆಟ್ಟಿ, ಉದ್ಯಮಿ ಕನ್ಯಾನ ಕೂಳೂರು ಸದಾಶಿವ ಶೆಟ್ಟಿ, ಜಾಗತಿಕ ಬಂಟ ಒಕ್ಕೂಟದ ಅಧ್ಯಕ ಹರೀಶ್ ಶೆಟ್ಟಿ ಐಕಳ, ವಿವಿಧ ಕ್ಷೇತ್ರಗಳ ಗಣ್ಯರಾದ ಡಾ ಕೆ ಪ್ರಕಾಶ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಹರೀಶ್ ಶೇರಿಗಾರ್, ಪ್ರವೀಣ ಶೆಟ್ಟಿ ವಕ್ವಾಡಿ, ರವಿನಾಥ ವಿ. ಶೆಟ್ಟಿ ಅಂಕಲೇಶ್ವರ ಪ್ರವೀಣ ಬಿ. ಶೆಟ್ಟಿ, ಜನ್ಮದಿನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಎ. ಸುರೇಶ ರೈ, ಜನ್ಮದಿನೋತ್ಸವ ಸಮಿತಿಯ ಮುಂಬೈ ಘಟಕ ದ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜನ್ಮದಿನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪನೆಯಡ್ಕ ಲಿಂಗಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.ಮಹಾಬಲೇಶ್ವರ ಭಟ್ ನಿಡುವಜೆ ಅವರ ಸಂಕಲನದ ಶ್ರೀ ಮದ್ಭಗವದ್ಗೀತೆಯ ತ್ರಿಭಾಷಾ (ಸಂಸ್ಕೃತ_ ಕನ್ನಡ ಮತ್ತು ಇಂಗ್ಲಿಷ್) ಶಬ್ದಾರ್ಥ ಕೋಶ ಕೃತಿ ಬಿಡುಗಡೆ ಮಾಡಲಾಯಿತು.
ಗಾಲಿಕುರ್ಚಿ ವಿತರಣೆ, ಅನಾರೋಗ್ಯ ಪೀಡಿತರ ಚಿಕಿತ್ಸೆ ಗೆ ನೆರವು ನವನಿಕೇತನ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಸಹಾಯ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಕೊಡುಗೆಮರಣ ಸಾಂತ್ವನ ನೆರವು, ಉಚಿತ ಕನ್ನಡ ವಿತರಣೆ ಮೊದಲಾದ ನೆರವು ನೀಡಲಾಯಿತು. ಜನ್ಮದಿನೋತ್ಸವ ಗ್ರಾಮೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಗ್ರಾಮವಿಕಾಸ ಯೋಜನೆಯ ವರದಿ ಮಂಡಿಸಿದರು.ಪ್ರಕಾಶ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಜನ್ಮದಿನೋತ್ಸವ ಸಮಿತಿಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಜಯಪ್ರಕಾಶ ಶೆಟ್ಟಿ ಪೆರ್ಮುದೆ ಸಂಯೋಜನೆಯಲ್ಲಿ ಒಡಿಯೂರು ಶ್ರೀ ದತ್ತಾಂಜನೇಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಗಣಪತಿ ಹವನ ಮಹಾಪೂಜೆ ನಡೆದು ಅನಂತರ ಒಡಿಯೂರು ರವಿರಾಜ ಶೆಟ್ಟಿ ಮತ್ತು ಬಳಗದಿಂದ ನಾಮಸಂಕೀರ್ತನೆ ನಡೆಯಿತು ಬಳಿಕ ಪಾದಪೂಜೆ,ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ನಡೆದವು.ರಾತ್ರಿ ಏಳು ಗಂಟೆಯಿಂದ ವಿಶೇಷ ರಂಗಪೂಜೆ ಬೆಳ್ಳಿ ರಥೋತ್ಸವ, ಮಹಾಪೂಜೆ ಜರಗಿತು.
ಜನಪ್ರತಿನಿಧಿಗಳಿಗೆ ಶ್ಲಾಘನೆ
ಲೋಕಸಭೆಯಲ್ಲಿ ತುಳುಭಾಷೆಗೆ ಧ್ವನಿ ಎತ್ತಿದ ಮಂಗಳೂರಿನ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಕಾಸರಗೋಡು ಸಂಸದ ವಿಧಾನಸಭೆಯಲ್ಲಿ ತುಳು ಭಾಷೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾತನಾಡಿದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಒಡಿಯೂರು ಶ್ರೀಗಳು ಶ್ಲಾಘಿಸಿದರು.