ಯಕ್ಷಗಾನ

ಮಂಗಳೂರಿನಲ್ಲಿ ಸಿದ್ಧಿ ದಶಯಾನ: ಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಮಕ್ಕಳ ನೂಪುರ ನಿನಾದ

ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯ ವೃಂದದ ಯಕ್ಷ ಸಿದ್ಧಿ ಸಂಭ್ರಮ ಸಿದ್ಧಿ ದಶಯಾನಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಮಕ್ಕಳ ನೂಪುರ ನಿನಾದ ತಾ.10 ಮತ್ತು 11ಆಗಸ್ಟ್ 2024ರಂದು ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ  ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳಿಂದ ತೊಡಗಿಸಿಕೊಂಡು,ನಾಟ್ಯ ಮಯೂರಿ, ಯಕ್ಷ ಸವ್ಯಸಾಚಿ ಬಿರುದುಗಳೊಂದಿಗೆ ಖ್ಯಾತರಾಗಿ, ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ತೊಡಗಿಸಿಕೊಂಡು ಅವಿಭಜಿತ ..ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರುಷಗಳಾದ ನಿಟ್ಟಿನಲ್ಲಿ ದಶಮಾನೋತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ  ಸುದ್ದಿಗೋಷ್ಠಿಯಲ್ಲಿ ಆಯೋಜಕರು ಮಾಹಿತಿ ನೀಡಿದ್ದಾರೆ.

 

ಸದಾಶಿವ ಐತಾಳ್, ರಕ್ಷಿತ್ ಶೆಟ್ಟಿ ಪಡ್ರೆ, ರವಿಪ್ರಸಾದ್ ಶೆಟ್ಟಿ, ಶ್ರವಣ್ ಉಡುಪ ಕತ್ತಲ್ ಸಾರ್, ಉಮೇಶ್ ಆಚಾರ್ಯ,ಸತ್ಯಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು. ಕಾರ್ಯಕ್ರಮದ ಉದ್ದೇಶ ಹಾಗೂ ವಿವರಗಳು ಹೀಗಿವೆ.

 ವಿವಿಧೆಡೆಯ  ಶಿಷ್ಯ ವೃಂದವನ್ನು ಒಗ್ಗೂಡಿಸಿ 300ಕ್ಕೂ ಅಧಿಕ ಶಿಷ್ಯವೃಂದದವರಿಂದ ಸಂಯೋಜಿಸಲಾದ ಹತ್ತು ಹಲವು ಯಕ್ಷಗಾನ ವಿವಿಧ ಪ್ರದರ್ಶನಗಳನ್ನು ಯಕ್ಷ ಸಿದ್ಧಿ ಸಂಭ್ರಮ , ಸಿದ್ಧಿ ದಶಯಾನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 10, ಶನಿವಾರ ಹಾಗೂ .11 ರವಿವಾರ ಬೆಳಗ್ಗೆಯಿಂದ ರಾತ್ರಿ ವರೆಗೆ ಮಂಗಳೂರು , ಉರ್ವಸ್ಟೋರ್, ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಆಗಸ್ಟ್ 10 ಕಾರ್ಯಕ್ರಮಗಳು:

.10ರಂದು ಬೆಳಗ್ಗೆ 9ರಿಂದ ಚೌಕಿ ಪೂಜೆ, ಪೂರ್ವ ರಂಗ, 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಯಕ್ಷಗಾನ ವಿದ್ವಾಂಸ ಶ್ರೀ ವಾಸುದೇವ ರಂಗಾ ಭಟ್ಟ ಅವರು ಉದ್ಘಾಟಿಸಲಿರುವರು. ಮಂಗಳೂರು ಮಹಾ ನಗರ ಪಾಲಿಕೆಯ  ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಲಿರುವರು.ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್, ಕದ್ರಿ ಪೊಲೀಸ್ ಠಾಣಾ ಉಪ ಠಾಣಾಧಿಕಾರಿ ಸುಧಾಕರ ರಾವ್ ಪಾಟೀಲ್, ಪಡ್ರೆ ಶ್ರೀ ಧೂಮಾವತಿ ಚಾವಡಿ ಮನೆಯ ಗಡಿ ಪ್ರಧಾನ ಬಾಬು ಬಂಡ್ರಿಯಾಲ್, ಜಲ್ಲಿಗುಡ್ಡೆ ಅಂಬಾ ಭವಾನಿ ಭಜನಾ ಮಂದಿರದ ಗೌರವಾಧ್ಯಕ್ಷ ಹರಿಕೇಶವ ಜಾದವ್, ಹಿರಿಯ ವಕೀಲರಾದ ಸದಾಶಿವ ಐತಾಳ್ಅತಿಥಿಗಳಾಗಿ ಭಾಗವಹಿಸುವರು.

10.30ರಿಂದ ವಿದ್ಯಾರ್ಥಿಗಳಿಂದ ದೇವಸೇನಾನಿ, ಗಂಟೆ 12ರಿಂದ ಮಹಿಳೆಯರಿಂದ ಪಾವನ ಪಕ್ಷಿ ಯಕ್ಷಗಾನ ನಡೆಯಲಿದೆ.

ಮಧ್ಯಾಹ್ನ ಭೋಜನ ವಿರಾಮ, 1.45ರಿಂದ ಯಕ್ಷಗಾನ ರೂಪಕ ದಾಶರಥಿ ದರ್ಶನ, 3.45ರಿಂದ ಧರ್ಮ ದಂಡನೆ ಯಕ್ಷಗಾನ ನಡೆಯಲಿದೆ. ಸಂಜೆ 5ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅಧ್ಯಕ್ಷತೆ ವಹಿಸುವರು. ಉದ್ಯಮಿಗಳಾದ .ಕೆ. ಜಯರಾಮ ಶೇಖ, ಪ್ರೇಮನಾಥ ಮಾರ್ಲ,, ಹಿರಿಯ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು,ಇರ್ವತ್ತೂರು ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ತಾನದ ಅಧ್ಯಕ್ಷ ಮೋಹನ ಶೆಟ್ಟಿ ನರ್ವಲ್ದಡ್ಡ, ಉರ್ವ, ಚಿಲಿಂಬಿ ಸಾಯಿ ಶಕ್ತಿ ಕಲಾಬಳಗದ ಸಂಚಾಲಕಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್, ಪಾತೂರು ಮೇಗಿನ ಮನೆ ಕಲ್ಲಾಡಿ ಧೂಮಾವತಿ ದೈವಸ್ಥಾನದ ಅಧ್ಯಕ್ಷ | ಚಂದ್ರಹಾಸ ರೈ, ಕಾಟಿಪಳ್ಳ ಬ್ರಹ್ಮ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಯಾಕರ ಪಿ.ಕುಳಾಯಿ, ಬಲಿಪಗುಳಿ ಉದ್ಯಮಿ ಡಾ.ರಮೇಶ್ ಚಂದ್ರ ಸಿ.ಜಿ., ಗುರುಪುರ ಡಾ.ಬಿ.ಆರ್ ಆಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಜಯಕರ ಶೆಟ್ಟಿ, ಎಂಆರ್ಪಿಎಲ್ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸುವರು. ಸಂಜೆ ಗಂಟೆ 6.30ರಿಂದ ಯಕ್ಷ ನವರಸ ವೈಭವ, 8ರಿಂದ ವಿನೂತನ ಪ್ರಯೋಗ ಹಿಮ್ಮಿಂಚು ಯಕ್ಷಗಾನ ನಡೆಯಲಿದೆ.

 ಆಗಸ್ಟ್ 11 ಕಾರ್ಯಕ್ರಮಗಳು:

.11ರಂದು ಬೆಳಗ್ಗೆ ಗಂಟೆ 9.30ರಿಂದ ಯಕ್ಷಗಾನ ಲೀಲಾಮಾನುಷ ವಿಗ್ರಹ, ಗಂಟೆ 12ರಿಂದ ನೃತ್ಯ ವಚನ ಚಿತ್ರ ಕಥನ ನಡೆಯಲಿದೆಮಧ್ಯಾಹ್ನ ಭೋಜನ ವಿರಾಮ ಬಳಿಕ ದಶಾವತಾರ ಮತ್ತು ಪಾದ ಪ್ರತೀಕ್ಷಾ ಯಕ್ಷಗಾನ ಪ್ರದಶರನ ನಡೆಯಲಿದೆ. ಸಂಜೆ ಸಮಾರೋಪ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಲಿರುವರು.ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ  ಆಸ್ರಣ್ಣ  ಅವರು ಆಶೀರ್ವಚನ ನೀಡಲಿರುವರು. ಉದ್ಯಮಿ ಮಿಥುನ್ ರೈ, ರಾಮನಗರ ಪೊಲೀಸ್ ಉಪಾಽಕ್ಷಕ ದಿನಕರ ಶೆಟ್ಟಿ,ನಿಟ್ಟೆ ಎನ್ಎಂಎಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ನಿರಂಜನ ಎನ್.ಚಿಪ್ಳೂಣ್ಕರ್, ಜಾಗತಿಕ ಬಂಟರ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಗುರುಪುರ ಬಂಟರ ಮಾತೃಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ಮಂಗಳೂರು ಟ್ರಾಫಿಕ್ ಟಾಣೆಯ ಸಂತೋಷ್ ಪಡೀಲು, ಉದ್ಯಮಿ ಎಂ.ಹರಿ ರಾವ್ ಕೈಕಂಬ, ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು, ಕಲಾ ಪೋಷಕಿ ಶಕುಂತಲಾ ಆರ್ಭಟ್ ಸುರತ್ಕಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂದರ್ಭದಲ್ಲಿ ಯಕ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷ ಸಿದ್ಧಿ ಪ್ರಶಸ್ತಿ, ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ಗಂಟೆ 6 ರಿಂದ ಯಕ್ಷಗಾನ ವೈವಿಧ್ಯ ನೀನೋನಾನೋ,ಬಳಿಕ ತೆಂಕು ಬಡಗು ತಿಟ್ಟಿನ ಯಕ್ಷಗಾನ ನಾಗಶ್ರೀ ನಡೆಯಲಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ