ಬಂಟ್ವಾಳ: ಮಂಗಳವಾರ ರಾತ್ರಿಯಾಗುತ್ತಿದ್ದಂತೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ 10.4 ಮೀಟರ್ ಆಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ 8.5 ಆಗಿದ್ದು, ರಾತ್ರಿ ವೇಳೆಗೆ 10.4 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಇನ್ನಷ್ಟು ಏರಿಕೆ ಕಾಣಬಹುದಾದ ಸಂಭವನೀಯತೆ ಇರುವ ಕಾರಣ, ಬಂಟ್ವಾಳ ಎಸ್.ವಿ.ಎಸ್. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ 17 ಮಂದಿಯನ್ನು ಶಿಫ್ಟ್ ಮಾಡಲಾಯಿತು. ನಾವೂರು ಪರ್ಲದ ಸೈಂಟ್ ಜೇಕಬ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದು ಕುಟುಂಬವನ್ನು ಶಿಫ್ಟ್ ಮಾಡಲಾಗಿದೆ. ಇಲ್ಲಿ ಒಟ್ಟು 5 ಜನರಿದ್ದಾರೆ. ತಹಸೀಲ್ದಾರ್ ಡಿ.ಅರ್ಚನಾ ಭಟ್ ನೇತೃತ್ವದಲ್ಲಿ ಮುಂಜಾಗರೂಕತಾ ಕ್ರಮವನ್ನು ಕಂದಾಯ ಮತ್ತಿತರ ಇಲಾಖೆ ಸಿಬಂದಿ ಜೊತೆ ಕೈಗೊಂಡಿದ್ದಾರೆ.