ಬಂಟ್ವಾಳ: ರಾಯಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗ್ಯೂ ಕುರಿತ ಮಾಹಿತಿ ಕಾರ್ಯಾಗಾರ ಲಯನ್ಸ್ ಕ್ಲಬ್ ಲೊರೆಟ್ಟೊ ಅಗ್ರಾರ್ ವತಿಯಿಂದ ನಡೆಯಿತು. ಈ ಸಂದರ್ಭ ವನಮಹೋತ್ಸವ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ವಹಿಸಿದ್ದರು. ಲೊರೆಟ್ಟೊ ಲಯನ್ಸ್ ಕ್ಲಬ್ ಅಗ್ರಾರ್ ಅಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಸಚಿನ್ ನೊರೊನ್ಹಾ, ಖಜಾಂಚಿ ರೋಯ್ ಕಾರ್ಲೊ, ರೀಜನ್ ಚೇರ್ಪರ್ಸನ್ ಎವ್ಜಿನ್ ಲೋಬೊ, ಲಿಯೊ ಕ್ಲಬ್ ಅಧ್ಯಕ್ಷ ಅನ್ಜಿಲ್ ಮಾರ್ಟಿಸ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ನಿವೃತ್ತ ಹಿರಿಯ ಆರೋಗ್ಯ ಸಹಾಯಕರಾದ ಚಂದ್ರಶೇಖರ ಗಟ್ಟಿ ನಡೆಸಿಕೊಟ್ಟರು. ಈ ಸಂದರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ರಮೇಶ್ ನಾಯಕ್ ರಾಯಿ, ಪ್ರಭಾರ ಮುಖ್ಯ ಶಿಕ್ಷಕರಾದ ಜಾನೆಟ್ ಕೊನ್ಸೆಸೊ, ಸಹ ಶಿಕ್ಷಕರಾದ ಬೇಬಿ, ಸಿದ್ದಪ್ಪ ಕಡೂರು, ತನುಜ, ಹೇಮಾ ಎಚ್ ರಾವ್, ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.