ಬಂಟ್ವಾಳ: ತುಳು ಭಾಷೆ 8 ನೇ ಪರಿಚ್ಚೇಧಕ್ಕೆ ಸೇರ್ಪಡೆ ಸಹಿತ ತುಳು ಭಾಷೆಗೆ ಸ್ಥಾನಮಾನ ದೊರಕುವ ವಿಚಾರವಾಗಿ ಅಡೆತಡೆ ನಿವಾರಿಸಲು ನೇಪಾಲದ ಮುಕ್ತಿನಾಥ ದೇವಾಲಯದಲ್ಲಿ ತುಳುನಾಡ ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಲಿಪಿಯನ್ನು ಹೊಂದಿರುವ ಪ್ರಾಚೀನ ಇತಿಹಾಸವಿರುವ, ಜಾನಪದ ಮತ್ತು ಶಿಷ್ಟ ಸಾಹಿತ್ಯ ಸಮೃದ್ಧವಾಗಿರುವ ತುಳು ಭಾಷೆಯನ್ನು ಕೇಂದ್ರ ಸರಕಾರ 8 ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕು ಹಾಗೂ ರಾಜ್ಯ ಸರಕಾರ ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ತುಳುನಾಡ ಭಕ್ತರು ನೇಪಾಲದಲ್ಲಿರುವ ಚೀನಾ ಗಡಿ ಪ್ರದೇಶದ ಸಮುದ್ರ ಮಟ್ಟದಿಂದ ಸುಮಾರು 13000 ಅಡಿ ಎತ್ತರದಲ್ಲಿರುವ ಮುಕ್ತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ತುಳುನಾಡ ದ್ವಜವನ್ನು ದೇವಾಲಯದ ಪ್ರಾಂಗಣದಲ್ಲಿ ಪ್ರದರ್ಶನ ಮಾಡಿದರು.
ಉತ್ತರ ಭಾರತದ ಹಲವು ಪುಣ್ಯ ಕ್ಷೆತ್ರಗಳು ಸೇರಿದಂತೆ ನೇಪಾಳ ದೇಶದಲ್ಲಿನ ಪಶುಪತಿ ನಾಥ್ ಹಾಗೂ ಮುಕ್ತಿನಾಥ್ ದೇವಸ್ಥಾನಗಳ ದರ್ಶನಕ್ಕಾಗಿ ತುಳುನಾಡಿನ ಭಕ್ತರ ತಂಡವು ಬಂಟ್ವಾಳ ತಾಲೂಕಿನ ನರಿಕೊಂಬುವಿನ ಜಯಶ್ರೀ ಮತ್ತು ಜಯಕುಮಾರ್ ನೇತೃತ್ವದಲ್ಲಿ ತೆರಳಿರುವ ಸಂದರ್ಭ ತುಳುನಾಡ ಅಭಿಮಾನಿ ಸದಸ್ಯರು ತುಳುನಾಡ ದ್ವಜವನ್ನು ಅರಳಿಸುವ ಮೂಲಕ ಹಳೆಯ ಕಾಲದ ಬೇಡಿಕೆಗೆ ಮುಕ್ತಿ ದೊರಕಲು ಜನಜಾಗೃತಿ ಮೂಡಿಸಿದರು.