ಬಂಟ್ವಾಳ

ಶ್ರೀ ಸಾಯಿ ಕಿಡ್ಸ್ ಝೋನ್ ನಲ್ಲಿ ಆಟಿದ ಕೂಟ

ಬಂಟ್ವಾಳ: ಶ್ರೀಸಾಯಿ ಕಿಡ್ ಝೋನ್ ಇದರ ಆಶ್ರಯದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಸಹಯೋಗದೊಂದಿಗೆ ಆಟಿದ ಕೂಟ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಸಾಯಿ ಕಿಡ್‌ಝೋನ್‌ನ ಸಭಾಂಗಣದಲ್ಲಿ ನಡೆಯಿತು.


ಜೆಸಿಐ ವಲಯ ತರಬೇತುದಾರ(ಪ್ರೋವಿಜನಲ್), ಪತ್ರಕರ್ತ ಸಂದೀಪ್ ಸಾಲ್ಯಾನ್ ಆಟಿದ ಕೂಟ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಆರ್ಟ್ ಕ್ರಾಪ್ಟ್ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರಿಗೆ ಆಟಿ ಕಷ್ಟದ ತಿಂಗಳು ಆಗಿದ್ದರೂ ಕೂಡ ಆ ತಿಂಗಳಿನಲ್ಲಿದ್ದ ವೈಶಿಷ್ಠ ಪೂರ್ಣ ಆಚರಣೆಗಳು ತುಳುವರ ವೈಚಾರಿಕತೆಯ ಬದುಕನ್ನು, ಕಷ್ಟದ ಸಂದರ್ಭದಲ್ಲೂ ಪರಸ್ಪರ ಹೊಂದಿಕೊಂಡು ಬದುಕುವ ಜೀವನ ವಿಧಾನವನ್ನು ಅನಾವರಣಗೊಳಿಸುತ್ತದೆ. ಆಟಿಯ ಒಂದೊಂದು ಆಚರಣೆಯ ಹಿಂದೆಯೂ ತನ್ನದೇ ಆದ ಉದ್ದೇಶ, ದೂರದೃಷ್ಟಿ ಚಿಂತನೆ ಹಾಗೂ ಅಧ್ಯಯನಕ್ಕೆ ಯೋಗ್ಯವಾಗುವಂತ ವಿಚಾರಗಳಿರುವುದನ್ನು ಕಾಣಬಹುದಾಗಿದೆ. ತುಳುನಾಡಿನ ವಿಶಿಷ್ಠ ಪರಂಪರೆ, ಆಚರಣೆಗಳನ್ನು ಮಕ್ಕಳಿಗೆ ಪೋಷಕರು ತಿಳಿಸಿಕೊಡಬೇಕಾಗಿದೆ. ಇಷ್ಟೆಲ್ಲಾ ವೈಶಿಷ್ಯತೆಗಳಿರುವ ಆಟಿ ನಿಜಾರ್ಥದಲ್ಲಿ ತುಳುನಾಡಿನ ಬ್ಯೂಟಿ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಐತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರ ನಿರಂತರ ಪ್ರಯತ್ನ ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಕಂಡಿದೆ. ಪೋಷಕರು ತಮ್ಮ ಮನೆಯಲ್ಲಿಯೇ ಬಗೆ ಬಗೆಯ ಆಹಾರಗಳನ್ನು ತಯಾರಿಸಿ ತಂದಿರುವುದು ಅಭಿನಂದನೀಯ ಎಂದರು.

ಪಿಟಿಎ ಅಧ್ಯಕ್ಷ ಜ್ಞಾನೇಶ್ ಜಿ. ರಾವ್, ಉಪಾಧ್ಯಕ್ಷೆ ಸುಪ್ರಿತಾ, ಕೋಶಧಿಕಾರಿ ದೇವೇಂದ್ರಪ್ಪ, ಶ್ರೀ ಸಾಯಿ ಎಜುಕೇಷನಲ್ ಟ್ರಸ್ಟ್‌ನ ಕೋಶಾಧಿಕಾರಿ ರಾಜೇಶ್ ಅಮೀನ್ ಅಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ದೀಕ್ಷಿತಾ ಸ್ವಾಗತಿಸಿದರು, ಸಹಶಿಕ್ಷಕಿ ಪುಷ್ಪಲತಾ ವಂದಿಸಿದರು. ಆಡಳಿತ ಸಮಿತಿ ಸದಸ್ಯೆ ಆರತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ವಿದ್ಯಾಥಿಗಳಿಂದ ತುಳುನಾಡಿನ ವೈಭವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಯಾರಿಸಿದ ಕ್ರಾಪ್ಟ್ ವಸ್ತುಗಳ ಪ್ರದರ್ಶನ, ಆಟಿ ತಿಂಗಳ ವಿವಿಧ ಆಹಾರ ಖಾದ್ಯಗಳ ಪ್ರದರ್ಶನ ಹಾಗೂ ಸಹಭೋಜನ ನಡೆಯಿತು.

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ