ಬಂಟ್ವಾಳ: ವಿಶ್ವವು ಭಾರತದತ್ತ ಗಮನ ಸೆಳೆಯುವ ಸಮಗ್ರ ಅಭಿವೃದ್ಧಿ ಪರ ಬಜೆಟ್ ಮಂಡನೆಯಾಗಿದೆ ಎಂದು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿ. ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉನ್ನತ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಬ್ರಹತ್ ಮೊತ್ತ ಮೀಸಲು, 12 ಕೈಗಾರಿಕಾ ಪಾರ್ಕ್ ಸೇರಿದಂತೆ ಸಣ್ಣ ಕೈಗಾರಿಕೆಗೆ ಪ್ರೋತ್ಸಾಹ, ಮಹಿಳಾ ಸಹಕಾರ ಸಂಘಗಳಿಗೆ ಉತ್ತೇಜನದೊಂದಿಗೆ ರಾಷ್ಟ್ರೀಯ ಸಹಕಾರ ನೀತಿ ಜಾರಿ, ಮೊಬೈಲ್ ಮತ್ತು ಚಿನ್ನ ಬೆಲೆ ಇಳಿಕೆಗೆ ಕ್ರಮ, ತಾರತಮ್ಯವಿಲ್ಲದೇ ಎಲ್ಲಾ ರಾಜ್ಯಗಳಿಗೆ ಶೂನ್ಯ ಬಡ್ಡಿ ಸಾಲ ನೀಡಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುದ್ರಾ ಸಾಲ ಪ್ರಮಾಣ 10 ಲಕ್ಷ ದಿಂದ 20 ಲಕ್ಷ ಏರಿಕೆ, ವಸತಿ ರಹಿತರಿಗೆ 1 ಕೋಟಿ ಮನೆ ನಿರ್ಮಾಣ, 32 ಹೊಸ ವಿವಿಧ ತೋಟಗಾರಿಕೆ ಬೆಳೆಗಳಿಗೆ ಒತ್ತು, ಒಟ್ಟಿನಲ್ಲಿ ವಿಕಸಿತ ಭಾರತದ ಕಲ್ಪನೆವುಳ್ಳ ಮದ್ಯಾಂತರ ಬಜೆಟಿನ ವಿಸ್ತರಣೆಯ ಭಾಗವಾಗಿರುವ ಬಜೆಟ್ ಭವಿಷ್ಯದ ವಿಶ್ವಗುರುವಿಗೆ ಪೂರಕ ಬಜೆಟ್ ಇದು ಎಂದಿದ್ದಾರೆ.