ಬಂಟ್ವಾಳ

NEWS UPDATE: ಭಾರಿ ಗಾಳಿಗೆ ಉರುಳಿದ ಕಂಬಗಳು, ಕತ್ತಲಲ್ಲಿ ಬಿ.ಸಿ.ರೋಡ್, ರಸ್ತೆ ಸಂಚಾರಕ್ಕೆ ಅಡಚಣೆ

ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ವಿದ್ಯುತ್ ಕಂಬವೊಂದು ಉರುಳಿಬಿದ್ದಿದೆ. ಪಕ್ಕದ ಜಾಗಗಳಲ್ಲಿ ಮತ್ತಷ್ಟು ಕಂಬಗಳು ಉರುಳಿಬಿದ್ದಿರುವುದಾಗಿ ಮಾಹಿತಿಗಳು ಲಭಿಸಿದ್ದು, ಸ್ಥಳಕ್ಕೆ ಕಂದಾಯ, ಮೆಸ್ಕಾಂ, ಪೊಲೀಸ್ ಅಧಿಕಾರಿಗಳು ಆಗಮಿಸಿ ತೆರವು ಕಾರ್ಯ ನಡೆಸುತ್ತಿದ್ದಾರೆ

ಸ್ಪರ್ಶ ಕಲಾ ಮಂದಿರ ಬಳಿ ಮರವೊಂದು ಉರುಳಿದೆ.

ಈ ಘಟನೆಯಿಂದ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು. ಈಗಾಗಲೇ ಬಿ.ಸಿ.ರೋಡ್ ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂದರ್ಭ ಸವಾರರಿಗೆ ಚಾಲಕರಿಗೆ ಗೊಂದಲಗಳು ಉಂಟಾಗುತ್ತಿದ್ದು, ರಾತ್ರಿ ವೇಳೇ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts