ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಗಾಳಿ ಮಳೆ ಸುರಿಯುತ್ತಿದೆ. ಈ ಮಧ್ಯೆ ನೇತ್ರಾವತಿ ನದಿ ನೀರಿನ ಮಟ್ಟ ರಾತ್ರಿ 10.30ಕ್ಕೆ 7.3 ಮೀಟರ್ ಗೆ ಏರಿಕೆ ಕಂಡಿದ್ದು, ಅಪಾಯದ ಮಟ್ಟ 8.5 ಆಗಿದೆ. ಈ ಹಿನ್ನೆಲೆಯಲ್ಲಿ ತೀರ ಪ್ರದೇಶವಾದ ಪಾಣೆಮಂಗಳೂರಿನ ಆಲಡ್ಕದ 6 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದಂತೆ ಅಪಾಯದ ಮಟ್ಟ ಸಂಭವಿಸಿದರೆ, ಉಳಿದ ಸಂಭ್ಯಾವ್ಯ ಅಪಾಯದ ಜಾಗದಲ್ಲಿ ವಾಸಿಸುವವರಿಗೂ ಸೂಚನೆ ನೀಡಲಾಗಿದ್ದು, ತಾಲೂಕಾಡಳಿತ ಯಾವುದೇ ಅಪಾಯವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ತಹಸೀಲ್ದಾರ್ ಡಿ.ಅರ್ಚನಾ ಭಟ್ ಮಾಹಿತಿ ನೀಡಿದ್ದಾರೆ.
18ರಂದು ಶಾಲೆ, ಪಿಯುವರೆಗೆ ರಜೆ: ರಾತ್ರಿ ಜಿಲ್ಲಾಧಿಕಾರಿ ಹೊರಡಿಸಿದ ಸೂಚನೆಯಂತೆ ಬಂಟ್ವಾಳ ತಾಲೂಕಿನ ಅಂಗನವಾಡಿ, ಶಾಲೆ, ಹೈಸ್ಕೂಲು ಮತ್ತು ಪಿಯುಸಿವರೆಗೆ ರಜೆ ಘೋಷಿಸಲಾಗಿದೆ.