ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಏರಿಳಿತ ಕಂಡಿತು. ಮಳೆಯ ಕಾರಣದಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗತೊಡಗಿದ ಹಿನ್ನೆಲೆಯಲ್ಲಿ ಬೆಳಗಿನ ಜಾವ ನೇತ್ರಾವತಿ ನದಿಯ ಮಟ್ಟ ಏರಿಕೆ ಕಂಡಿತ್ತು. ಬೆಳಗ್ಗೆ 6.1 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದ್ದರೆ, ಸಂಜೆಯ ವೇಳೆ ತಗ್ಗಿತು. ಸಂಜೆ 4.9 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿತ್ತು.