ಯಕ್ಷಗಾನ ಎಂಬುದು ಕೇವಲ ಒಂದು ಕಲೆಯಲ್ಲ. ಅದು ಪೂಜೆಗೆ ಸಮಾನಾದ ಸೇವೆ.vಯಕ್ಷಗಾನದ ಸೇವೆ ಮಾಡುವವರಿಗೆ ಸದಾ ದೇವತಾನುಗ್ರಹ ಪ್ರಾಪ್ತವಾಗುತ್ತದೆ ಎಂದು ಉದ್ಯಮಿ ಬಿ. ಶಿವಪ್ರಸಾದ್ ಪ್ರಭು ಅಭಿಪ್ರಾಯ ಪಟ್ಟರು.
ಮಂಗಳೂರಿನಲ್ಲಿ ಭ್ರಾಮರೀ ಯಕ್ಷಮಿತ್ರರು ಟ್ರಸ್ಟ್ ಸಂಯೋಜನೆಯಲ್ಲಿ ಆಗಸ್ಟ್ 3 ರಂದು ಪುರಭವನದಲ್ಲಿ ಜರಗಲಿರುವ ಭ್ರಾಮರೀ ಯಕ್ಷವೈಭವ 2024 ರ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಮಾದರಿ ಕಾರ್ಯಕ್ರಮ ನೀಡುವ ಮೂಲಕ ಮನೆಮಾತಾಗಿದೆ ಎಂದರು.
ಟ್ರಸ್ಟಿನ ಅಧ್ಯಕ್ಷ ವಿನಯಕೃಷ್ಣ ಕುರ್ನಾಡು ಅವರು ಮಾತನಾಡಿ ಆ. 3 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 4 ರಿಂದ ಮರುದಿನ ಮುಂಜಾನೆಯವರೆಗೆ ಯಕ್ಷಗಾನ ಜರಗಲಿದೆ. ಸಂಜೆ 4 ರಿಂದ ಯಕ್ಷಛಾಯಾಚಿತ್ರ ಸಂಗ್ರಹಕ ಮನೋಹರ ಕುಂದರ್ ಅವರ ಅಪೂರ್ವ ಯಕ್ಷಛಾಯಾಚಿತ್ರ ಪ್ರದರ್ಶನ ಜರಗಲಿದೆ. ಸಂಜೆ 7 ರಿಂದ ಸಭಾ ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಹಾಗೂ ರಾತ್ರಿ 9 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪಂಚವಟಿ, ಕಂಸವಿವಾಹ, ಸುಧನ್ವ ಮೋಕ್ಷ, ಮಹಿರಾವಣ ಕಾಳಗ ಎಂಬ ಪೌರಾಣಿಕ ಪ್ರಸಂಗಗಳು ಮಂಜಾನೆಯವರೆಗೆ ಪ್ರದರ್ಶನಗೊಳ್ಳಲಿದೆ ಎಂದರು. ಬಳಗದ ಟ್ರಸ್ಟಿಗಳಾದ ರವಿಶಂಕರ್ ಭಟ್, ಅಶ್ವಿತ್ ಮಾರ್ಲ ಬಳಗದ ಹಿರಿಯ ಸದಸ್ಯರಾದ ಸೂರ್ಯನಾರಾಯಣ ಭಟ್ ಶ್ರೀನಿವಾಸ್ , ಪಶುಪತಿ ಆಚಾರ್, ಸುರೇಶ್ ಅವರು ಉಪಸ್ಥಿತರಿದ್ದರು. ಬಳಗದ ಸದಸ್ಯ ಸತೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಆಮಂತ್ರಣಕ್ಕೆ ಮುಂದೆ ಓದಿರಿ