ಬಂಟ್ವಾಳ

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವಾರ್ಷಿಕ ಮಹಾಸಭೆ, ಪ್ರಗತಿ ಪುಸ್ತಕ ಬಿಡುಗಡೆ

ಜಾಹೀರಾತು

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಘಟಕಾಧ್ಯಕ್ಷ ರಶೀದ್ ವಿಟ್ಲ  ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ವೀಕ್ಷಕರಾಗಿ ಭಾಗವಹಿಸಿದ್ದ ಮೂಡಬಿದಿರೆ ಘಟಕದ ಕೋಶಾಧಿಕಾರಿ ಸಲೀಂ ಹಂಡೇಲು ಮಾತನಾಡಿ, ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ  ವ್ಯಕ್ತಪಡಿಸಿದರು. ಜಮೀಯ್ಯತುಲ್ ಫಲಾಹ್ ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.

ಬಂಟ್ವಾಳ ಘಟಕದ ಕಾರ್ಯದರ್ಶಿ ಕೆ.ಕೆ.ಶಾಹುಲ್ ಹಮೀದ್ 2023-24 ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಲೆಕ್ಕ ಪತ್ರ ಮಂಡಿಸಿದರು.

ಘಟಕದ ಸಚಿತ್ರ ವರದಿ ಮತ್ತು ಲೆಕ್ಕಪತ್ರದ ಕಿರು ಹೊತ್ತಗೆಯನ್ನು ಜಿಲ್ಲಾಧ್ಯಕ್ಷ  ಕೆ.ಕೆ.ಶಾಹುಲ್ ಹಮೀದ್ ಬಿಡುಗಡೆ ಮಾಡಿದರು, ಘಟಕದ ಕಾರ್ಯ ಚಟುವಟಿಕೆ ಹಾಗೂ ಮಹಾಸಭೆಯ ಸಿದ್ಧತೆಯಲ್ಲಿ ಶ್ರಮ ವಹಿಸಿದ ಅಬ್ದುಲ್ ರಝಾಕ್ , ಪಿ.ಮೊಹಮ್ಮದ್ ಮತ್ತು ಶೇಖ್ ರಹ್ಮತುಲ್ಲಾ ಅವರನ್ನು ಗೌರವಿಸಲಾಯಿತು, ಪೂರ್ವಾಧ್ಯಕ್ಷರಾದ ಸುಲೈಮಾನ್ ಸೂರಿಕುಮೇರ್ ಮತ್ತು ಉಸ್ಮಾನ್ ಹಾಜಿ ಕರೋಪಾಡಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಸದಸ್ಯರಲ್ಲಿ ಕೋರಲಾಯಿತು.

ಹಾಲಿ ಕಾರ್ಯಕಾರಿ ಸಮಿತಿಯನ್ನು 2024 – 25‌ ರ ಸಾಲಿಗೆ ಮುಂದುವರಿಸುವ ಬಗ್ಗೆ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಸಭೆಯಲ್ಲಿ ಘೋಷಿಸಿದರು. ಘಟಕಾದ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿ, ಘಟಕದ ಪೂರ್ವಾಧ್ಯಕ್ಷ ಅಬೂಬಕ್ಕರ್ ವಿಟ್ಲ ಕಿರಾಅತ್ ಪಠಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ವಂದಿಸಿ, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts