ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗಿನ ಜಾವ ಹೆಚ್ಚಳವಾಗಿದೆ. ಈ ಭಾಗದಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಸುಮಾರು 8 ಮೀಟರ್ ಎತ್ತರಕ್ಕೆ ಬರುವ ಹೊತ್ತಿಗೆ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸುತ್ತದೆ. ಈಗಾಗಲೇ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ ವಾಸಿಸುವವರು ಹಾಗೂ ಪ್ರತಿ ಬಾರಿಯೂ ನೀರಿನ ಮಟ್ಟ ಏರುವ ಸಂದರ್ಭ ತೊಂದರೆಗೊಳಗಾಗುವವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಡಳಿತ ತಿಳಿಸಿದೆ. ಮಳೆಗಾಲದಲ್ಲಿ ನೇತ್ರಾವತಿ ನದಿ ಘಟ್ಟ ಪ್ರದೇಶದ ಮಳೆ ಹಾಗೂ ವೈಪರೀತ್ಯಗಳಿಗೆ ಏರಿಳಿತವಾಗುವುದು ಸಹಜ ಪ್ರಕ್ರಿಯೆಯಾಗಿದೆ.