ಅತೀತ ಬ್ರಹ್ಮ ಇವರು ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮಂಗಳೂರಿನ ಗಣೇಶ್ ಅಂಡ್ ಸುಧೀರ್ ಸಂಸ್ಥೆಯಲ್ಲಿ ಸಿಎ ಆರ್ಟಿಕಲ್ ಶಿಪ್ ಅವಧಿಯನ್ನು ಪೂರೈಸಿದ್ದ ಇವರು ಬಿ.ಸಿ.ರೋಡ್ ಮೊಡಂಕಾಪು ನಿವಾಸಿಗಳಾದ ಉಪನ್ಯಾಸಕಿ ರೇಶ್ಮಾ ಭಟ್ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ, ಉಪನ್ಯಾಸಕ ಅಜಕ್ಕಳ ಗಿರೀಶ ಭಟ್ ದಂಪತಿಯ ಪುತ್ರ.