ವಾಟ್ಸಾಪ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ಕೊಕ್ಕಡ ನಿವಾಸಿಯೋರ್ವರು 1 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಾಥ ಬಿ (29) ತನ್ನ ಮನೆಯಲ್ಲಿರುವಾಗ, ವಾಟ್ಸಾಪ್ ಗೆ ಅವರ ಬ್ಯಾಂಕಿಗೆ ಸಂಬಂಧಿಸಿರುವಂತೆ ಕಾಣಲ್ಪಡುವ ಮೆಸೆಜ್ ಬಂದಿರುತ್ತದೆ. ಮೆಸೇಜ್ ನಲ್ಲಿದ್ದ ಲಿಂಕ್ ನ್ನು ಓಪನ್ ಮಾಡಿದ ತಕ್ಷಣ ವಾಟ್ಸಾಪ್ ಬ್ಲಾಕ್ ಆಗಿರುತ್ತದೆ. ಬಳಿಕ ಯಾವುದೇ ಓಟಿಪಿ ನೀಡದಿದ್ದರೂ, ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾನೆ ಎಂದವರು ದೂರು ನೀಡಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 53/2024 ಕಲಂ: 417,419 IPC 66 (c) 66( D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…